ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡ ಆಡುತ್ತಿರುವ ಕಾಮನ್ ವೆಲ್ತ್ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯರು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದಾರೆ.
ಭಾರತದ ಪರ ಸ್ಪೋಟಕ ಆಟವಾಡಿದ ಸ್ಮೃತಿ ಮಂಧನಾ 32 ಎಸೆತಗಳಲ್ಲಿ 61 ರನ್ ಸಿಡಿಸಿದರು. ಕೇವಲ 5 ಓವರ್ ಗಳಲ್ಲೇ ಭಾರತ 60 ರನ್ ದಾಟಿತು. ಇನ್ನೊಂದೆಡೆ ತಕ್ಕ ಸಾಥ್ ನೀಡಿದ ಜೆಮಿಮಾ ರೋಡ್ರಿಗಸ್ ಔಟಾಗದೇ 44 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಕೇವಲ 20 ರನ್ ಗೆ ವಿಕೆಟ್ ಒಪ್ಪಿಸಿದರೆ ದೀಪ್ತಿ ಶರ್ಮಾ 22 ರನ್ ಗಳಿಸಿ ಔಟಾದರು.
ಇದೀಗ ಭಾರತೀಯ ವನಿತೆಯರು ನಿಯಂತ್ರಿತ ದಾಳಿ ಸಂಘಟಿಸಬೇಕಿದೆ. ಇಲ್ಲದೇ ಹೋದರೆ ಚಿನ್ನದ ಕನಸು ನನಸಾಗದು.