Select Your Language

Notifications

webdunia
webdunia
webdunia
webdunia

ಮೆಕ್ಸಿಕೊ ಹೊಟೆಲ್‌ನಲ್ಲಿ ಅರ್ಜಂಟೈನಾ ಒಲಿಂಪಿಕ್ ಫುಟ್ಬಾಲ್ ತಂಡದ ದರೋಡೆ

ಮೆಕ್ಸಿಕೊ ಹೊಟೆಲ್‌ನಲ್ಲಿ ಅರ್ಜಂಟೈನಾ ಒಲಿಂಪಿಕ್ ಫುಟ್ಬಾಲ್ ತಂಡದ ದರೋಡೆ
ಪುಯಿಬ್ಲಾ: , ಶನಿವಾರ, 30 ಜುಲೈ 2016 (10:21 IST)
ಮೆಕ್ಸಿಕೊದಲ್ಲಿ ಸೌಹಾರ್ದ ಪಂದ್ಯವಾಡುವಾಗ ಆಟಗಾರರ ಹೊಟೆಲ್ ಕೋಣೆಯಿಂದ ನಗದು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಅರ್ಜಂಟೈನಾ ಒಲಿಂಪಿಕ್ ಫುಟ್ಬಾಲ್ ತಂಡವು ಶುಕ್ರವಾರ ದೂರು ನೀಡಿದೆ. ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕಾ ತಂಡ ಅರ್ಜಂಟೈನಾ ಗುರುವಾರ ರಾತ್ರಿ ಆಡಿದ ಪಂದ್ಯ 0-0ಯಿಂದ ಡ್ರಾ ಆದ ಬಳಿಕ ಈ ಕಳ್ಳತನ ನಡೆದಿದೆ ಎಂದು ಅರ್ಜಂಟೈನಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಕ್ಲಾಡಿಯೊ ತಾಪಿಯಾ ತಿಳಿಸಿದ್ದಾರೆ.

ಎರಡೂ ತಂಡಗಳು ರಿಯೊ ಡಿ ಜನೈರಿಯ ಒಲಿಂಪಿಕ್ಸ್‌ನಲ್ಲಿ ಮುಂದಿನ ಶುಕ್ರವಾರ ಭಾಗವಹಿಸುವ ಮುಂಚೆ ಇದು ಕೊನೆಯ ಸಿದ್ಧತಾ ಪಂದ್ಯವಾಗಿತ್ತು. 
 
ನಾವು ರಾತ್ರಿ 11.40ಕ್ಕೆ ವಾಪಸು ಬಂದು ಕೋಣೆಗಳಿಗೆ ತೆರಳಿದಾಗ, ನಮ್ಮ ಹಣ, ನಗದನ್ನು ದರೋಡೆ ಮಾಡಿದ್ದು ನಮಗೆ ಅರಿವಾಯಿತು ಎಂದು ತಾಪಿಯಾ ಹೇಳಿದ್ದಾರೆ. ಎಎಫ್‌ಎ, ಕ್ಯಾಮಿನೊ ರಿಯಲ್ ಹೊಟೆಲ್ ಮತ್ತು ವಿಮಾ ಸಂಸ್ಥೆ ನಡುವೆ ಅರ್ಜಂಟೈನಾ ನಿಯೋಗಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಒಪ್ಪಂದ ಏರ್ಪಟ್ಟಿದೆ ಎಂದು ಮೆಕ್ಸಿಕನ್ ಫುಟ್ಬಾಲ್ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.
 
ತಮಗೆ ಪರಿಹಾರ ನೀಡುವುದು ಖಾತರಿಯಾಗುವ ತನಕ ನಿಯೋಗ ಹೊಟೆಲ್‌ನಿಂದ ಕದಲುವುದಿಲ್ಲ ಎಂದು ತಾಪಿಯಾ ಎಚ್ಚರಿಸಿದರು. ಅವರು ಸೆಕ್ಯೂರಿಟಿ ಕ್ಯಾಮೆರಾಗಳನ್ನು ಪರಿಶೀಲನೆ ನೆಡಸಿದ್ದು ಕಳ್ಳರು ಯಾರೆಂದು ಗೊತ್ತಾಗಿದ್ದರೂ ಕಳ್ಳರನ್ನು ರಕ್ಷಿಸುತ್ತಿದ್ದಾರೆ ಎಂದು ಮೆಕ್ಸಿಕನ್ ಫುಟ್ಬಾಲ್ ಒಕ್ಕೂಟದ ಮುಂದೆ ತಾಪಾ ದೂರಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆ. 16ರಿಂದ ಮೈಸೂರು, ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್