ಅರ್ಜೆಂಟೀನಾ ಸ್ಟಾರ್ ಆಟಗಾರ ಲಯೋನಲ್ ಮೆಸ್ಸಿ ಜಗತ್ತಿನ ಅತ್ಯಂತ ಸಂಭಾವನೆ ಪಡೆಯುವ ಅಥ್ಲೀಟ್ ಆಗಿದ್ದಾರೆ. ಅವರು ಸ್ಪೇನ್ ದೇಶಕ್ಕೆ ನಾಲ್ಕು ದಶಲಕ್ಷ ಯೂರೋಗಳಷ್ಟು ತೆರಿಗೆ ವಂಚಿಸಿದ್ದಾರೆಂಬ ಆರೋಪದ ಮೇಲೆ ಬಾರ್ಸೆಲೋನಾದಲ್ಲಿ ವಿಚಾರಣೆ ಎದುರಿಸಿದ್ದಾರೆ. ಬಾರ್ಸೆಲೋನಾದಲ್ಲಿ ಲೀಗ್ ಮತ್ತು ಕಪ್ ಡಬಲ್ ಗೆಲುವು ಗಳಿಸಿದ ಬಳಿಕ ಐದು ಬಾರಿ ವರ್ಷದ ವಿಶ್ವಆಟಗಾರ ಪ್ರಶಸ್ತಿ ಪಡೆದ ಮೆಸ್ಸಿ ಮತ್ತು ಅವರ ತಂದೆ ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಜೂನ್ 2ರವರೆಗೆ ಈ ವಿಚಾರಣೆ ನಡೆಯಲಿದ್ದು, ಮೆಸ್ಸಿ ಆದಿನ ತಂದೆಯೊಂದಿಗೆ ಹೇಳಿಕೆ ನೀಡಲಿದ್ದಾರೆ. ಮೆಸ್ಸಿ ಅಮೆರಿಕಾದಲ್ಲಿ ಕೋಪಾ ಅಮೆರಿಕಾದಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ತಂಡವನ್ನು ಸೇರುವ ಕೆಲವೇ ದಿನಗಳ ಮುಂಚೆ ಕೋರ್ಟ್ ವಿಚಾರಣೆ ಆರಂಭವಾಗಿದೆ.
ಅರ್ಜೆಂಟಿನಾ ಕ್ಯಾಲಿಫೋರ್ನಿಯಾದಲ್ಲಿ ಜೂನ್ 6ರಂದು ಪಂದ್ಯಾವಳಿಯ ಮೊದಲ ಆಟವನ್ನು ಹಾಲಿ ಚಾಂಪಿಯನ್ನರಾದ ಚಿಲಿ ವಿರುದ್ಧ ಆಡಲಿದೆ. ಮೆಸ್ಸಿ ಮತ್ತು ಅವರ ತಂದೆ ಜಾರ್ಜ್ ಹೊರಾಸಿಯೊ ಮೆಸ್ಸಿ ಬೆಲೈಜ್ ಮತ್ತು ಉರುಗ್ವೆಯಲ್ಲಿ ನಕಲಿ ಕಂಪನಿಗಳ ಸರಣಿಯನ್ನು ಸ್ಥಾಪಿಸಿ 4.16 ದಶಲಕ್ಷ ಯೂರೋ( 4.7 ದಶಲಕ್ಷ ಡಾಲರ್) ತೆರಿಗೆ ವಂಚಿಸಿದ್ದಾರೆಂದು ಆರೋಪಿಸಲಾಗಿದೆ.
ಮೆಸ್ಸಿ ಮತ್ತು ಅವರ ತಂದೆ ತಪ್ಪಿತಸ್ಥರೆಂದು ಕಂಡುಬಂದರೆ ಸ್ಪೇನ್ ಪ್ರಾಸಿಕ್ಯೂಟರ್‌ಗಳು ಅವರಿಬ್ಬರಿಗೆ 22 ವರೆ ವರ್ಷ ಜೈಲುಶಿಕ್ಷೆ ಮತ್ತು ತೆರಿಗೆ ವಂಚಿಸಿದ ಮೊತ್ತಕ್ಕೆ ಸಮನಾದ ದಂಡದ ಹಣವನ್ನು ವಿಧಿಸಬೇಕೆಂದು ಕೋರಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.