ಐಸಿಸಿ ವಿಶ್ವ ಕಪ್ ಟಿ 20ಯ ಕಾಮೆಂಟರಿ ಬಾಕ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಶೋಯಬ್ ಅಕ್ತರ್ ನಡುವೆ ಮಾತಿನ ಚಕಮಕಿಯನ್ನು ಕ್ರಿಕೆಟ್ ಪ್ರೇಮಿಗಳು ಆಮೂಲಾಗ್ರವಾಗಿ ಆನಂದಿಸಿದ್ದರು. ಅವರ ಸಂಬಂಧವು ಮೈದಾನದಲ್ಲಿ ವೈರತ್ವದಿಂದ ಮೀಡಿಯಾ ಪಂಡಿತರಾಗಿ ಆತ್ಮೀಯ ಸ್ನೇಹಕ್ಕೆ ತಿರುಗಿತ್ತು.
ಮಾಜಿ ವೇಗಿಯ ವಿರುದ್ಧ ಮಾತಿನ ಬಾಣ ಎಸೆಯುವ ಅವಕಾಶವನ್ನು ವೀರು ಯಾವತ್ತೂ ಕಳೆದುಕೊಂಡಿಲ್ಲ. ಶೋಯಬ್ ಅಕ್ತರ್ ಕೂಡ ವೀರು ಕಾಮೆಂಟ್‌ಗಳನ್ನು ಒಳ್ಳೆಯ ಮನೋಭಾವದಿಂದ ಸ್ವೀಕರಿಸುತ್ತಾರೆ.
ಶನಿವಾರ ಶೋಯಬ್ ಸಾಮಾಜಿಕ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ತಾನು ಶ್ರೇಷ್ಟ ಪಾಕಿಸ್ತಾನ ತಂಡದ ಭಾಗವಾಗಿದ್ದೆ ಎಂದು ಹೇಳಿದ್ದರು. ಕೂಡಲೇ ಸಮಯ ವ್ಯರ್ಥ ಮಾಡದ ಭಾರತದ ಮಾಜಿ ಓಪನರ್ ರಾವಲ್ಪಿಂಡ್ ಎಕ್ಸ್‌ಪ್ರೆಸ್‌ಗೆ ತಮ್ಮ ರೇಜರ್‌ನಷ್ಟು ಮೊನಚಾದ ವ್ಯಂಗ್ಯೋಕ್ತಿಯನ್ನು ಹರಿಯಬಿಟ್ಟರು.
ಒಳ್ಳೆಯ ಟೀಂ ಶೋಯಬ್ ಬಾಯಿ, ಅನೇಕ ಲೆಜೆಂಡ್‌ಗಳಿದ್ದರು. ಆದರೂ ಯಾವುದೇ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲಾಗಿಲ್ಲ. ಈಗಲೂ ಮೌಕಾಗೆ ಶೋಧಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.