ಪಾಕಿಸ್ತಾನ ಸರ್ಕಾರವು ಬಿಸಿಸಿಐ ಜತೆ ದ್ವಿಪಕ್ಷೀಯ ಸರಣಿ ಕುರಿತು ಯಾವುದೇ ಮಾತುಕತೆ ಆರಂಭಿಸದಂತೆ ಪಾಕ್ ಕ್ರಿಕೆಟ್ ಮಂಡಳಿಯನ್ನು ನಿರ್ಬಂಧಿಸಿದೆ. ಉಭಯರಾಷ್ಟ್ರಗಳ ನಡುವೆ ಏರುಪೇರಾದ ರಾಜಕೀಯ ಸಂಬಂಧವು ದ್ವಿಪಕ್ಷೀಯ ಸರಣಿಗೆ ಅಡ್ಡಿಯಾಗಿತ್ತು.
ಸರ್ಕಾರ ಹೊಸ ಸೂಚನೆ ನೀಡುವ ತನಕ ಪಿಸಿಬಿ ಬಿಸಿಸಿಐ ಜತೆ ದ್ವಿಪಕ್ಷೀಯ ಸರಣಿಯನ್ನು ಆರಂಭಿಸುವ ಕುರಿತು ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ಶಹರ್‌ಯಾರ್ ಖಾನ್ ಹೇಳಿದರು. ಆದ್ದರಿಂದ ಇತ್ತೀಚಿನ ಐಸಿಸಿ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳ ಜತೆ ಚರ್ಚೆ ನಡೆಸುವುದನ್ನು ಪಿಸಿಬಿ ತಪ್ಪಿಸಿದ್ದು ಇದೇ ಕಾರಣದಿಂದಾಗಿ ಎಂದು ಅವರು ಹೇಳಿದರು.
ಅನುರಾಗ್ ಠಾಕೂರ್ ಅವಲರು ಬಿಸಿಸಿಐ ಹೊಸ ಅಧ್ಯಕ್ಷರಾಗಿರುವುದು ಮುಂದಿ ಭಾರತ-ಪಾಕ್ ಕ್ರಿಕೆಟ್ ಮಾತುಕತೆಗೆ ಧನಾತ್ಮಕ ಬೆಳವಣಿಗೆ ಎಂದೂ ಖಾನ್ ಪ್ರತಿಕ್ರಿಯಿಸಿದರು.
2008ರಲ್ಲಿ ಮುಂಬೈ ಭಯೋತ್ಪಾದನೆ ದಾಳಿ ನಡೆದಾಗಿನಿಂದ ಪಾಕಿಸ್ತಾನ ಜತೆ ಭಾರತ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಆದರೆ ಪಾಕಿಸ್ತಾನವು ಭಾರತದಲ್ಲಿ 2012/13ರಲ್ಲಿ ಸದ್ಭಾವನಾ ಪ್ರವಾಸವನ್ನು ಕೈಗೊಂಡಿತ್ತು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.