ಹೌಸ್ಟನ್: ಅರ್ಜೈಂಟೀನಾ ಸ್ಟ್ರೈಕರ್ ಲಯನಲ್ ಮೆಸ್ಸಿ ಮಂಗಳವಾರ ತಮ್ಮ ರಾಷ್ಟ್ರದ ಸರ್ವಕಾಲಿಕ ಗೋಲ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಪಾ ಅಮೆರಿಕ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ವಿರುದ್ಧ ಮೆಸ್ಸಿ ಸ್ಕೋರ್ ಮಾಡಿದಾಗ ಅವರ ಅಂತಾರಾಷ್ಟ್ರೀಯ ಟ್ಯಾಲಿಯನ್ನು 55 ಗೋಲುಗಳಿಗೆ ಒಯ್ದಿದ್ದಾರೆ. ಐದು ಬಾರಿ ವರ್ಷದ ವಿಶ್ವ ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಪಾತ್ರರಾಗಿರುವ ಮೆಸ್ಸಿ ಹೌಸ್ಟನ್‌ನಲ್ಲಿ 32ನೇ ನಿಮಿಷದಲ್ಲಿ ಗೋಲು ಹೊಡೆದು ಅರ್ಜೈಂಟೀನಾಗೆ 2-0 ಮುನ್ನಡೆ ಒದಗಿಸಿದರು.
112ನೇ ಅಂತಾರಾಷ್ಟ್ರೀಯ ಪಂದ್ಯದ ಅವರ ಗೋಲಿನಿಂದ ಎರಡು ಬಾರಿಯ ವಿಶ್ವ ಚಾಂಪಿಯನ್ನರಾದ ಅರ್ಜೈಂಟೀನಾ ಪರ 78 ಪಂದ್ಯಗಳಲ್ಲಿ 54 ಗೋಲುಗಳನ್ನು ಗಳಿಸಿದ ಗೇಬ್ರಿಯಲ್ ಬ್ಯಾಟಿಸ್ಟುಟಾಗಿಂತ ಮೇಲುಗೈ ಸಾಧಿಸಿದ್ದಾರೆ.
ಮೆಸ್ಸಿ ಗೋಲು 25 ಯಾರ್ಡುಗಳ ದೂರದಿಂದ ಫ್ರೀ ಕಿಕ್ ಮೂಲಕ ಗಳಿಸಿದ್ದಾಗಿದ್ದು, ಅಮೆರಿಕದ ಗೋಲುರಕ್ಷಕನಿಗೆ ಅದನ್ನು ತಡೆಯುವ ಅವಕಾಶ ಕಡಿಮೆಯಾಗಿತ್ತು. ಇದಾದ ಬಳಿಕ ಎಜೆಕ್ವಿಲ್ ಲಾವೇಜಿ ಮೂರು ನಿಮಿಷಗಳಲ್ಲಿ ಮತ್ತೊಂದು ಗೋಲು ಗಳಿಸಿದರು. ಬಾರ್ಸೆಲೋನಾ ಸ್ಟ್ರೈಕರ್ ಈಗ ಕೊಪಾ ಅಮೆರಿಕಾದಲ್ಲಿ 5 ಗೋಲುಗಳನ್ನು ಗಳಿಸಿದ್ದಾರೆ. ಪಂದ್ಯಾವಳಿಯ ಟಾಪ್ ಗೋಲ್ ಸ್ಕೋರರ್ ಆಗಲು ಚಿಲಿಯ ಎಡ್ವರ್ಡೊ ವರ್ಗಾಸ್ ಅವರಿಗಿಂತ ಒಂದು ಗೋಲು ಹಿಂದಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.