Select Your Language

Notifications

webdunia
webdunia
webdunia
webdunia

ನಿದ್ರೆರಹಿತ ರಾತ್ರಿಯನ್ನು ಕಳೆದ ಮಂದೀಪ್ ಮೈದಾನಕ್ಕಿಳಿದಾಗ ಒತ್ತಡವೆಲ್ಲಾ ಮಾಯ

ನಿದ್ರೆರಹಿತ ರಾತ್ರಿಯನ್ನು ಕಳೆದ ಮಂದೀಪ್ ಮೈದಾನಕ್ಕಿಳಿದಾಗ ಒತ್ತಡವೆಲ್ಲಾ ಮಾಯ
ಹರಾರೆ: , ಮಂಗಳವಾರ, 21 ಜೂನ್ 2016 (18:28 IST)
ಎರಡನೇ ಟಿ 20ಯಲ್ಲಿ ತಂಡದ ಸರಣಿ ಡ್ರಾದ ಗೆಲುವಿನಲ್ಲಿ ಅರ್ಧಶತಕ ಬಾರಿಸಿದ ಮಂದೀಪ್ ಸಿಂಗ್ ತಾವು ಒತ್ತಡದಿಂದಾಗಿ ಪಂದ್ಯದ ಹಿಂದಿನ ದಿನ ನಿದ್ರೆ ರಹಿತ ರಾತ್ರಿಗಳನ್ನು ಕಳೆದಿದ್ದಾಗಿ ಹೇಳಿದ್ದು, ತಾವು ಮೈದಾನಕ್ಕೆ ಇಳಿದ ಕ್ಷಣವೇ ಆ ಒತ್ತಡ ಮಾಯವಾಯಿತು ಎಂದಿದ್ದಾರೆ. 
 
ಸಾಧಾರಣ ಮೊತ್ತ 100 ರನ್ ಚೇಸ್‌ನಲ್ಲಿ ಅಜೇಯ 52 ರನ್ ಗಳಿಸಿದ ಮಂದೀಪ್, ತಾವು ಪಂದ್ಯಕ್ಕೆ ಮುಂಚೆ ಅನುಭವಿಸಿದ ಆತಂಕವು ಬ್ಯಾಟಿಂಗ್‌ಗಿಳಿದಾಗ ಅಚ್ಚರಿಯಂತೆ ಮಾಯವಾಯಿತು ಎಂದರು.  ಆಯ್ಕೆದಾರರು ನಮ್ಮನ್ನು ಗಮನಿಸುವುದರಿಂದ ಮತ್ತು ಪಂದ್ಯ ಗೆಲ್ಲುವ ಒತ್ತಡವು ನಿದ್ರೆರಹಿತ ರಾತ್ರಿ ಕಳೆಯುವಂತೆ ಮಾಡಿತು. ಅದು ಒತ್ತಡ ಅಥವಾ ಆತಂಕವಾಗಿರಲಿ, ಬ್ಯಾಟಿಂಗ್‌ಗೆ ಇಳಿದಾಗ ಸುಲಭವಾಗಿ ಮಾಯವಾಯಿತು ಎಂದಿದ್ದಾರೆ. 
 
 ಹಿಂದಿನ ಪಂದ್ಯದಲ್ಲಿ ಸೋತಿದ್ದು ಮನಸ್ಸಿಗೆ ನೋವಾಗಿತ್ತು. ನಾವು ಕೆಲವು ಅಂಶಗಳನ್ನು ಚರ್ಚಿಸಿ ನಾವು ಚರ್ಚಿಸಿದ ಅಂಶಗಳನ್ನು ಜಾರಿಗೆ ತಂದೆವು ಎಂದು ಸಂದೀಪ್ ಹೇಳಿದರು. ಭಾರತದ ಆಟಗಾರರು ಹೆಚ್ಚುವರಿ ಒತ್ತಡ ಹಾಕಿಕೊಳ್ಳುವ ಬದಲಿಗೆ ಎರಡನೇ ಟಿ 20 ಹಿನ್ನೆಲೆಯಲ್ಲಿ ರಿಲ್ಯಾಕ್ಸ್ ಆಗಿರಲು ಬಯಸಿದ್ದರು ಎಂದು ಮಂದೀಪ್ ಬಹಿರಂಗ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೊಚ್ಚಲ ಸಾಧನೆಗೆ ನೆಹ್ರಾ, ಕುಮಾರ್‌ಗೆ ಕ್ರೆಡಿಟ್ ನೀಡಿದ ಸ್ರಾನ್