ಸ್ಮರಣೀಯ ಟಿ 20 ಚೊಚ್ಚಲ ಪ್ರದರ್ಶನ ನೀಡಿದ ಯುವ ವೇಗಿ ಬರೀಂದರ್ ಸ್ರಾನ್ ಹಿರಿಯ ಆಟಗಾರ ಆಶಿಶ್ ನೆಹ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಿಂದ ಸ್ವಿಂಗ್ ಬೌಲಿಂಗ್ ಟಿಪ್ಸ್ ಸ್ವೀಕರಿಸಿದ್ದು ತನಗೆ ನೆರವಾಯಿತು ಎಂದಿದ್ದಾರೆ.
ಸ್ರಾನ್ ಜಿಂಬಾಬ್ವೆ ತಂಡವನ್ನು 99 ರನ್‌ಗೆ ನಿರ್ಬಂಧಿಸಿ 10 ರನ್‌ಗೆ 4 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ 10 ವಿಕೆಟ್ ಜಯಸಾಧಿಸಲು ನೆರವಾಗಿದ್ದರು.
ರಿವರ್ಸ್ ಸ್ವಿಂಗ್ ಕುರಿತು ನಾನು ನೆಹ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಿಂದ ಐಡಿಯಾ ಪಡೆದೆ. ಮುಖ್ಯ ಸಂಗತಿ ಒತ್ತಡವನ್ನು ನಿಭಾಯಿಸುವುದು ಮತ್ತು ಟಿ 20ಯಲ್ಲಿ ಬೌಲರ್ ಬ್ಯಾಟ್ಸ್‌ಮನ್ ಚಲನವಲನವನ್ನು ತಕ್ಷಣವೇ ಗಮನಿಸಬೇಕು. ಚೆಂಡಿನ ಲೆಂಗ್ತ್ ಮತ್ತು ವೇಗವನ್ನು ಬದಲಾಯಿಸಬೇಕು ಎಂದು ಸ್ರಾನ್ ಹೇಳಿದರು.
ಇದೊಂದು ಕನಸಿನ ಚೊಚ್ಚಲ ಪ್ರವೇಶವಾಗಿದ್ದು, ತಮ್ಮ ಚೊಚ್ಚಲ ಆಟ ನೆನಪಿನಲ್ಲಿ ಉಳಿಯಲು ಪ್ರತಿಯೊಬ್ಬರೂ ಬಯಸುತ್ತಾರೆ. ನಾನು ಚೊಚ್ಚಲ ಆಟಗಾರನಾಗಿ ಶ್ರೇಷ್ಟ ಟಿ 20 ಅಂಕಿಅಂಶ ಸಾಧಿಸಿದ್ದಕ್ಕೆ ಹೆಮ್ಮೆಎನಿಸುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ