ಭಾರತದ ಮುಂದಿನ ಕೋಚ್ ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿರುವ ಮಾಜಿ ನಾಯಕ ಸೌರವ್ ಗಂಗೂಲಿ, 2005ರಲ್ಲಿ ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಹೆಸರನ್ನು ಶಿಫಾರಸು ಮಾಡಿದಾಗ ಉಂಟಾದ ಪ್ರಮಾದವನ್ನು ಈಗ ಮಾಡುವುದಿಲ್ಲ ಎಂದು ಹೇಳಿದ್ದಾರೆ. ದೇಶದ ಕ್ರಿಕೆಟ್‌ನಲ್ಲಿ ಎರಡು ಪ್ರಕ್ಷುಬ್ಧ ವರ್ಷಗಳಲ್ಲಿ ಕಹಿ ಸಂಬಂಧವನ್ನು ಗಂಗೂಲಿ, ಚಾಪೆಲ್ ಹಂಚಿಕೊಂಡಿದ್ದರು.
ನನಗೆ ಕೋಚ್ ಆಯ್ಕೆ ಮಾಡುವ ಅವಕಾಶ ಒಮ್ಮೆ ಸಿಕ್ಕಿತ್ತು. ಚಾಪೆಲ್ ಆಯ್ಕೆಯಲ್ಲಿ ನಾನು ಗೊಂದಲ ಮಾಡಿಕೊಂಡೆನೆಂದು ಭಾವಿಸಿದ್ದೇನೆ. ಈಗ ನನಗೆ ತಿರುಗಿ ಅವಕಾಶ ಸಿಕ್ಕಿದೆ ಎಂದು ತಮ್ಮ ಪುಸ್ತಕ ಎ ಸೆಂಚುರಿ ಈಸ್ ನಾಟ್ ಎನಫ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಗಂಗೂಲಿ ಹೇಳಿದರು.
ಕ್ರಿಕೆಟ್ ಸಲಹಾ ಸಮಿತಿ ಅದನ್ನು ಸರಿಯಾಗಿ ಮಾಡುತ್ತದೆಂದು ಅವರು ಆಶಿಸಿದರು. ಅದೃಷ್ಟವಶಾತ್ ನನಗೆ ಈ ಬಾರಿ ಸಚಿನ್, ಲಕ್ಷ್ಮಣ್ ಮತ್ತು ಅಜಯ್ ಶಿರ್ಕೆ ಮತ್ತು ಅನುರಾಗ್ ಠಾಕುರ್ ಬೆಂಬಲ ಸಿಕ್ಕಿದೆ. ಒಟ್ಟಾಗಿ ನಾವು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಎಂದು ಗಂಗೂಲಿ ಹೇಳಿದರು.
ಜೀವನದಲ್ಲಿ ಯಾವುದೂ ಖಾತರಿಯಿರುವುದಿಲ್ಲ. 2 ವರ್ಷಗಳ ನಂತರ ಏನಾಗುತ್ತದೆಂದು ಯಾರಿಗೂ ಗೊತ್ತಿರುವುದಿಲ್ಲ. ನಾನು ಸಿಎಬಿ ಅಧ್ಯಕ್ಷ ಅಥವಾ ವಿಶ್ವ ಟ್ವೆಂಟಿ 20 ಫೈನಲ್ ಆಯೋಜಿಸುತ್ತೇವೆಂದು ಯಾರಿಗೂ ಗೊತ್ತಿರಲಿಲ್ಲ. ಜೀವನವೇ ಹಾಗೆ ಎಂದು ಗಂಗೂಲಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ