ನವದೆಹಲಿ: ಭಾರತದ ಹಿರಿಯ ಕ್ರಿಕೆಟರ್ ಹರ್ಭಜನ್ ಸಿಂಗ್ ಇತ್ತೀಚೆಗೆ ಡಬ್ಲ್ಯುಡಬ್ಲ್ಯುಇ ಸೂಪರ್‌ಸ್ಟಾರ್, ಅಜಾನುಬಾಹು ವ್ಯಕ್ತಿತ್ವದ ದಿ ಗ್ರೇಟ್ ಕಾಲಿಯನ್ನು ಭೇಟಿಯಾಗಿದ್ದರು. ಆಫ್ ಸ್ಪಿನ್ ಬೌಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಕಾಲಿ ಜತೆ ತಮ್ಮ ಚಿತ್ರವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಜಲಂಧರ್‌ನ ಹರ್ಭಜನ್ ನಿವಾಸದಲ್ಲಿ ಇಬ್ಬರು ಸ್ಟಾರ್‌ಗಳು ಭೇಟಿ ಮಾಡಿದ್ದು, ಕೆಲವು ಸವಿ ನೆನಪುಗಳನ್ನು ಹಂಚಿಕೊಂಡರು.
ಟ್ವಿಟರ್‌ನಲ್ಲಿ ತಮ್ಮ ಫೋಟೊ ಅಪ್‌ಲೋಡ್ ಮಾಡುವ ಮುಂಚೆ ಭಜ್ಜಿ, ಗ್ರೇಟ್ ಕಾಲಿಯನ್ನು ನನ್ನ ಮನೆಯಲ್ಲಿ ಭೇಟಿ ಮಾಡಿದೆ. ಕೆಲವು ಹಾಸ್ಯಪ್ರಸಂಗಗಳನ್ನು ಹಂಚಿಕೊಂಡೆವು ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕಾಲಿಯ ನಿಜನಾಮ ದಲೀಪ್ ಸಿಂಗ್ ರಾಣಾ ಟರ್ಬುನೇಟರ್ ಜತೆ ಟ್ವಿಟರ್‌ನಲ್ಲಿ ಚಿತ್ರ ಅಪಲೋಡ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ