ಕರ್ನಾಟಕ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಯನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 16 ಮತ್ತು ಅಕ್ಟೋಬರ್ 1ರ ನಡುವೆ ಆಡಿಸಲಾಗುತ್ತದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ 29ರಂದು ಟೂರ್ನಿಯ ಉದ್ಘಾಟನೆ ಸಮಾರಂಭದಂದು ತಿಳಿಸಿದರು.
ದಿವಂಗತ ಅಧ್ಯಕ್ಷ ಶ್ರೀಕಂಠದತ್ತ ಒಡೆಯರ್ ಅವರ ದೂರದೃಷ್ಟಿಯ ಕೆಪಿಎಲ್ ಫ್ರಾಂಚೈಸಿ ಆಧಾರದ ಟೂರ್ನಿಯಾಗಿದ್ದು, 2009ರಂದು ಮೊದಲಿಗೆ ಆಡಿಸಲಾಯಿತು. ಇದು ಕರ್ನಾಟಕ ಕ್ರಿಕೆಟ್‌ನ ಪ್ರತಿಭಾಶಾಲಿ ಆಟಗಾರರಿಂದ ಕೂಡಿದೆ.
2016ನೇ ಆವೃತ್ತಿಯಲ್ಲಿ ಕೂಡ ಅದೇ 8 ತಂಡಗಳಾದ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಮತ್ತು ರಾಕ್ ಸ್ಟಾರ್ಸ್ ಸೇರಿವೆ.
ಕಿರು ಇತಿಹಾಸದಲ್ಲೇ ಕೆಪಿಎಲ್ ದೂರದ ಹಳ್ಳಿಗಳಿಂದ ಭರವಸೆಯ ಕ್ರಿಕೆಟರುಗಳನ್ನು ಬೆಳಕಿಗೆ ತಂದಿದೆ. ಯುವ ಪ್ರತಿಭಾಶಾಲಿ ಕ್ರಿಕೆಟರುಗಳಿಗಾಗಿ ಐಪಿಎಲ್ ಶೋಧ ನಡೆಸುತ್ತಿದ್ದು ಕೆಪಿಎಲ್‌ಗೂ ಕೂಡ ಲಗ್ಗೆ ಹಾಕಿದೆ. ಕೆಸಿ ಕಾರಿಯಪ್ಪ, ಜಗದೀಶ್ ಸುಚಿತ್ ಮತ್ತು ಕೌಶಿಕ್ ಕೆಪಿಲ್‌ನಲ್ಲಿನ ಯಶಸ್ಸಿನ ಮೂಲಕ ಐಪಿಎಲ್ ಗುತ್ತಿಗೆಗಳನ್ನು ಪಡೆದಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.