ಮಾಜಿ ವಿಶ್ವ ಕಪ್ ವಿಜೇತ ತಂಡದ ಆಟಗಾರ ಮತ್ತು ರಾಷ್ಟ್ರೀಯ ಕೋಚ್ ಡೀಗೊ ಮರಡೋನಾ, ಅರ್ಜೆಂಟೀನಾ ಫುಟ್ಬಾಲ್ ಬಿಕ್ಕನ್ನು ಬಗೆಹರಿಸಲು ತಮ್ಮ ಬಳಿ ಯಾವುದೇ ಮಂತ್ರದಂಡವಿಲ್ಲ ಎಂದು ಹೇಳಿದ್ದಾರೆ. ಆದರೆ ಸ್ಥಗಿತಗೊಂಡ ಮಾತುಕತೆ ಪುನಾರಂಭಕ್ಕೆ ನೆರವಾಗುವುದಾಗಿ ಮರಡೋನಾ ಭರವಸೆ ನೀಡಿದರು.
ಅರ್ಜೆಂಟೀನಾ ಲೀಗ್ ಭವಿಷ್ಯದ ಕುರಿತು ಸ್ಥಗಿತಗೊಂಡ ಮಾತುಕತೆ ಪುನಾರಂಭಕ್ಕೆ ನೆರವಾಗುವಂತೆ ಫೀಫಾ ಅಧ್ಯಕ್ಷ ಜಿಯಾನಿ ಇನ್‌ಫ್ಯಾಂಟೈನೊ ಮರಡೋನಾಗೆ ಕರೆ ನೀಡಿದ್ದರು. ಅರ್ಜೆಂಟಿನಾದಲ್ಲಿ ದೊಡ್ಡ ಫುಟ್ಬಾಲ್ ಕ್ಲಬ್‌ಗಳು ಸೂಪರ್ ಲೀಗ್ ರಚಿಸಲು ನಿರ್ಧರಿಸಿರುವುದರಿಂದ ಬಿಕ್ಕಟ್ಟು ಉಂಟಾಗಿದೆ.
ನಾನು ಹೊಸ ಮಾದರಿಯನ್ನು ವಿರೋಧಿಸುವುದಿಲ್ಲ ಎಂದು ಅರ್ಜೆಂಟೈನಾ 1986 ವಿಶ್ವಕಪ್ ಗೆಲುವಿನ ರೂವಾರಿ 55 ವರ್ಷದ ಮರಡೋನಾ ಹೇಳಿದರು. ನನ್ನ ಬಳಿ ಮಂತ್ರದಂಡವಿಲ್ಲ. ನಾವು ಸಾಧಕ, ಬಾಧಕಗಳನ್ನು ಅಳೆಯಬೇಕು. ಅರ್ಜೆಂಟೈನಾ ಫುಟ್ಬಾಲ್ ಪ್ರೀತಿಸುವ ಪ್ರಾಮಾಣಿಕ ಜನರ ಜತೆ ಮಾತನಾಡಬೇಕು ಎಂದು ಮರಡೋನಾ ಹೇಳಿದ್ದಾರೆ.
ಅರ್ಜೆಂಟೈನಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಜುಲಿಯೊ ಗ್ರೊಂಡಾನಾ 2014ರಲ್ಲಿ ನಿಧನರಾದ ನಂತರ ಆಂತರಿಕ ಅಧಿಕಾರ ಹೋರಾಟವು ಸಂಸ್ಥೆಯಲ್ಲಿ ಉಂಟಾಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.