ಆಂಟೊಯಿನ್ ಗ್ರೈಜ್‌ಮ್ಯಾನ್ ಮತ್ತು ಡಿಮಿಟ್ರಿ ಪಾಯೆಟ್ ಅವರ ಕಡೆ ಕ್ಷಣದ ಗೋಲುಗಳು ಆತಿಥೇಯ ಫ್ರಾನ್ಸ್ ತಂಡವನ್ನು ಯೂರೊ 2016ರ ಕೊನೆಯ 16 ರ ಘಟ್ಟಕ್ಕೆ ತಂದಿದೆ. ಅಲ್ಬೇನಿಯಾ ವಿರುದ್ಧ ಕಠಿಣ ಪ್ರತಿರೋಧ ಕಂಡುಬಂದ ಬಳಿಕ ಫ್ರಾನ್ಸ್ ಈ ಗೆಲುವನ್ನು ಗಳಿಸಿತು.
ಆಟ್ಲೆಟಿಕೊ ಮ್ಯಾಡ್ರಿಡ್ ಮುಂಚೂಣಿ ಆಟಗಾರ ಗ್ರೇಜ್‌ಮ್ಯಾನ್ ವಿಶ್ರಾಂತಿಯಿಂದ ಹೊರಬಂದು 90ನೇ ನಿಮಿಷದಲ್ಲಿ ಗೋಲುಪಟ್ಟಿಗೆ ಹೆಡ್ ಮಾಡಿ ಗೋಲು ಗಳಿಸಿದರು. ಬಳಿಕ ಪಾಯೆಟ್ ಮತ್ತೊಂದು ಗೋಲು ಗಳಿಸಿದರು. ನಾವು ಅರ್ಹತೆ ಪಡೆಯಲು ಗೆಲುವನ್ನು ಗಳಿಸಿಬೇಕಿದ್ದು ಅದು ನೆರವೇರಿದೆ ಎಂದು ಗ್ರೇಜ್‌ಮನ್ ಪಂದ್ಯದ ನಂತರ ಹೇಳಿದರು.
ಫ್ರಾನ್ಸ್ ತಂಡವು ಪಂದ್ಯಾವಳಿಯ ಆರಂಭದ ಪಂದ್ಯದಲ್ಲಿ ರೊಮಾನಿಯಾ ವಿರುದ್ಧ 2-1ರಿಂದ ರೋಚಕವಾಗಿ ಗೆದ್ದಿತ್ತು.
ಫ್ರಾನ್ಸ್ ತಂಡವು ಸ್ವಿಜರ್‌ಲೆಂಡ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದ್ದು, ಸ್ವಿಸ್ ತಂಡ ಕೂಡ ರೊಮಾನಿಯಾ ವಿರುದ್ಧ 1-1 ಡ್ರಾ ಮೂಲಕ ನಾಕ್‌ಔಟ್ ಹಂತದ ಅಂಚಿನಲ್ಲಿದೆ.
ಇಂಗ್ಲೆಂಡ್ ವಿರುದ್ಧ ಗ್ರೂಪ್ ಬಿ ಓಪನರ್ ಪಂದ್ಯದಲ್ಲಿ ರಷ್ಯಾದ ಬೆಂಬಲಿಗರ ಹಿಂಸಾಚಾರದ ಹಿನ್ನೆಲೆಯಲ್ಲಿ 2018ರ ವಿಶ್ವಕಪ್ ಆತಿಥೇಯ ರಾಷ್ಟ್ರ ರಷ್ಯಾ ತಂಡ ಉಚ್ಚಾಟನೆಯ ಭೀತಿಯಲ್ಲಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.