Select Your Language

Notifications

webdunia
webdunia
webdunia
webdunia

ಶಾಕಿಂಗ್: ತಲೆಗೆ ಪೆಟ್ಟು ಬಿದ್ದ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಮೈದಾನದಲ್ಲೇ ಸಾವು

ಶಾಕಿಂಗ್: ತಲೆಗೆ ಪೆಟ್ಟು ಬಿದ್ದ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಮೈದಾನದಲ್ಲೇ ಸಾವು
ನವದೆಹಲಿ , ಮಂಗಳವಾರ, 24 ಮೇ 2016 (15:52 IST)
ಶಾಕಿಂಗ್ ಘಟನೆಯೊಂದರಲ್ಲಿ 24 ವರ್ಷ ವಯಸ್ಸಿನ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಮೈಕೇಲ್ ಫೇವರ್ ಆನ್ ಫೀಲ್ಡ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಫೇವರ್ ಅವರು ಡೆಫೆನ್ಸರೋಸ್ ಡಿ ಕೊಲನ್ ಎದುರಾಳಿ ಆಟಗಾರ ಜೆರೊನಿಮೊ ಕ್ವಿಂಟಾನಾ ವಿರುದ್ಧ ಚೆಂಡಿಗಾಗಿ ಸೆಣೆಸಾಡುವಾಗ ಕೆಳಕ್ಕೆ ನೆಲದ ಮೇಲೆ ಬಿದ್ದರು. ಫೇವರ್ ಅವರು ಪ್ರಾಂತೀಯ ಕ್ಲಬ್ ಸಾನ್ ಜಾರ್ಗೆ ಡಿ ವಿಲ್ಲಾ ಎಲಿಸಾಗೆ ಆಡುತ್ತಿದ್ದರು.
 
ಪಂದ್ಯದ ವೇಳೆಯಲ್ಲಿ ಫೇವರ್ ಆಕಸ್ಮಿಕವಾಗಿ ಎದುರಾಳಿಗೆ ಡಿಕ್ಕಿ ಹೊಡೆದಾಗ ಅವರ ಮಂಡಿ ತಲೆಗೆ ಬಡಿದು ಕೆಳಕ್ಕೆ ಬಿದ್ದಿದ್ದರು. ಸಾವರಿಸಿಕೊಂಡು ಮೇಲೆದ್ದಾಗ ಎರಡೂ ತಂಡಗಳು ಚೆಂಡಿಗಾಗಿ ತಳ್ಳಾಡುವಾಗ ಇನ್ನೊಬ್ಬ ಎದುರಾಳಿ ಆಟಗಾರ ಮುಖಕ್ಕೆ ಬಡಿದಾಗ ಕೆಳಕ್ಕೆ ಬಿದ್ದ ಫೇವರ್ ಮತ್ತೆ ಮೇಲೇಳಲೇ ಇಲ್ಲ.
 
ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ಅರ್ಜೆಂಟಿನಾ ಫುಟ್ಬಾಲ್ ಸಂಸ್ಥೆ ತಮ್ಮ ಶೋಕ ಸೂಚಿಸಲು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
 
ವಿಲ್ಲಾ ಎಲಿಸಾದ ಸಾನ್ ಜಾರ್ಗ್ ಆಟಗಾರ ಮೈಕೇಲ್ ಫೇವರ್ ಸಾವಿಗೆ ಎಎಫ್‌ಎ ಸಂತಾಪ ಸೂಚನೆ ಮಾಡಿದ್ದು, ಕುಟುಂಬ ಮತ್ತು ಕ್ಲಬ್‌ಗೆ ಬೆಂಬಲವನ್ನು ಕಳಿಸಿದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸ್ಥಳೀಯ ಪ್ರತಿಭೆಗಳ ಆಯ್ಕೆ: ಸುನಿಲ್ ಗವಾಸ್ಕರ್ ಶ್ಲಾಘನೆ