Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ 6500 ರನ್ ಪೂರೈಸಿದ ಮೊದಲಿಗ ವಿರಾಟ್ ಕೊಹ್ಲಿ!

ಐಪಿಎಲ್ ನಲ್ಲಿ 6500 ರನ್ ಪೂರೈಸಿದ ಮೊದಲಿಗ ವಿರಾಟ್ ಕೊಹ್ಲಿ!
bengaluru , ಶನಿವಾರ, 14 ಮೇ 2022 (14:28 IST)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ರನ್ ಬರ ಎದುರಿಸುತ್ತಿದ್ದರೂ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6500 ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ಎಸೆತಗಳಲ್ಲಿ 1 ಸಿಕ್ಸರ್ ಸೇರಿದ 20 ರನ್ ಗಳಿಸಿ ಔಟಾದರು. ಆದರೆ ಅವರು 1 ರನ್ ಗಳಿಸುತ್ತಿದ್ದಂತೆ 6500 ರನ್ ಪೂರೈಸಿ ದಾಖಲೆ ಬರೆದರು.
2008ರ ಉದ್ಘಾಟನಾ ಆವೃತ್ತಿಯಲ್ಲಿ ಆಡುವ ಮೂಲಕ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲೇ ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದಾರೆ.
ವಿರಾಟ್ ಕೊಹ್ಲಿ 6500 ರನ್ ಪೂರೈಸಿದ ಮೊದಲಿಗ ಎನಿಸಿಕೊಂಡರೆ ಐಪಿಎಲ್ ನಲ್ಲಿ 6 ರನ್ ಪೂರೈಸಿರುವ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್ 5876 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ 5829 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ 5528 ರನ್ ನೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಾಮಸ್ ಕಪ್ ಫೈನಲ್ ಗೆ ಭಾರತ ಲಗ್ಗೆ: ಡೆನ್ಮಾರ್ಕ್ ವಿರುದ್ಧ ಐತಿಹಾಸಿಕ ಜಯ