Select Your Language

Notifications

webdunia
webdunia
webdunia
webdunia

ವಿರಾಟ್‌ ಕೊಹ್ಲಿ ಫಾರ್ಮ್‌ ಗೆ ಮರಳಲಿ ಎಂದು ಪ್ರಾರ್ಥಿಸುವೆ: ಪಾಕಿಸ್ತಾನದ ವೇಗಿ ರಿಜ್ವಾನ್!‌

ವಿರಾಟ್‌ ಕೊಹ್ಲಿ ಫಾರ್ಮ್‌ ಗೆ ಮರಳಲಿ ಎಂದು ಪ್ರಾರ್ಥಿಸುವೆ: ಪಾಕಿಸ್ತಾನದ ವೇಗಿ ರಿಜ್ವಾನ್!‌
bengaluru , ಗುರುವಾರ, 12 ಮೇ 2022 (14:40 IST)
ಹಲವು ದಾಖಲೆಗಳನ್ನು ಬರೆದಿರುವ ವಿರಾಟ್‌ ಕೊಹ್ಲಿ ಅದ್ಭುತ ಆಟಗಾರ ಅವರು ಆದಷ್ಟು ಬೇಗ ಫಾರ್ಮ್‌ ಗೆ ಮರಳಲಿ ಎಂದು ಪ್ರಾರ್ಥಿಸುವೆ ಎಂದು ಪಾಕಿಸ್ತಾನದ ಮಧ್ಯಮ ವೇಗಿ ಮೊಹಮದ್‌ ರಿಜ್ವಾನ್‌ ಹೇಳಿದ್ದಾರೆ.
ಭಾರತದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಫಾರ್ಮ್‌ ಗೆ ಮರಳಲು ಕಠಿಣ ಶ್ರಮ ವಹಿಸುತ್ತಿದ್ದಾರೆ. ಅವರು ಖಂಡಿತ ಫಾರ್ಮ್‌ ಗೆ ಮರಳುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರು ಫಾರ್ಮ್‌ ಗೆ ಬೇಗ ಮರಳಲಿ ಎಂದು ಪ್ರಾರ್ಥಿಸುವೆ ಎಂದು ಅವರು ಹೇಳಿದ್ದಾರೆ.
ವಿರಾಟ್‌ ಕೊಹ್ಲಿ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಫಾರ್ಮ್‌ ನಲ್ಲಿದ್ದಾರೆ. ೨ ವರ್ಷಗಳಿಂದ ಅವರು ಒಂದೂ ಶತಕ ದಾಖಲಿಸಿಲ್ಲ. ಅಲ್ಲದೇ ಐಪಿಎಲ್‌ ನಲ್ಲಿ ೧ ಅರ್ಧಶತಕ ಸೇರಿದಂತೆ ೨೧೬ ರನ್‌ ಮಾತ್ರ ಗಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಧೈರ್ಯ ಮೆಚ್ಚಿದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ