Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲು ಕೊಹ್ಲಿಗೆ ಬೇಕಿದೆ 1 ರನ್!

ಐಪಿಎಲ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲು ಕೊಹ್ಲಿಗೆ ಬೇಕಿದೆ 1 ರನ್!
bengaluru , ಭಾನುವಾರ, 8 ಮೇ 2022 (14:18 IST)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಿದ ಸೂಚನೆ ನೀಡಿದ್ದು, ಭಾನುವಾರದ ಪಂದ್ಯದಲ್ಲಿ 1 ರನ್ ಗಳಿಸಿದರೂ ಮತ್ತೊಂದು ದಾಖಲೆ ಬರೆಯಲಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ನಲ್ಲಿ ಆಡಿದ 11 ಪಂದ್ಯಗಳಿಂದ 216 ರನ್ ಮಾತ್ರ ಗಳಿಸಿದ್ದಾರೆ. ಅದರಲ್ಲೂ ಒಂದೇ ಒಂದು ಅರ್ಧಶತಕ ಬಂದಿದೆ. ಇದೀಗ ಅವರು ಐಪಿಎಲ್ ನಲ್ಲಿ 6500 ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾಗಲು ಕೇವಲ ಒಂದು ರನ್ ಬೇಕಿದೆ.

ಕೊಹ್ಲಿ ಐಪಿಎಲ್ ನಲ್ಲಿ 218 ಪಂದ್ಯಗಳನ್ನು ಆಡಿದ್ದು, 36.51ರ ಸರಾಸರಿಯಲ್ಲಿ 6499 ರನ್ ಗಳಿಸಿದ್ದಾರೆ. 2013ರ ಆವೃತ್ತಿಯಲ್ಲಿ 973 ರನ್ ಗಳಿಸಿರುವುದು ಇದುವರೆಗಿನ ದಾಖಲೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ: ಕ್ರಿಸ್ ಗೇಲ್!