Select Your Language

Notifications

webdunia
webdunia
webdunia
webdunia

ಶೊಯೇಬ್ ಕೈ ಕೊಟ್ಟ ಬಳಿಕ ಮೊಹಮ್ಮದ್ ಶಮಿಯ ಕೈ ಹಿಡಿದರಂತೆ ಸಾನಿಯಾ ಮಿರ್ಜಾ!

Sania Mirza

Krishnaveni K

ಹೈದರಾಬಾದ್ , ಮಂಗಳವಾರ, 23 ಜನವರಿ 2024 (10:24 IST)
ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ ದಾಂಪತ್ಯ ಜೀವನ ಮುರಿದುಬಿದ್ದ ಬೆನ್ನಲ್ಲೇ ಇಬ್ಬರ ಬಗ್ಗೆಯೂ ನಾನಾ ರೀತಿಯ ಗಾಸಿಪ್ ಗಳು ಹಬ್ಬಿದೆ.

ಶೊಯೇಬ್ ಈಗಾಗಲೇ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ಸನಾ ಜಾವೇದ್ ಎಂಬ ನಟಿಯ ಜೊತೆ ಮೂರನೇ ಮದುವೆಯಾಗಿದ್ದಾರೆ. ಶೊಯೇಬ್-ಸಾನಿಯಾ ವಿಚ್ಛೇದನ ಪಡೆದಿದ್ದಾರೆ ಎಂದು ಕನ್ ಫರ್ಮ್ ಆಗಿದ್ದು ಆಗಲೇ.

ಇದೀಗ ಸಾನಿಯಾ ಬಗ್ಗೆ ಕೆಲವರು ಅನುಕಂಪ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಪಾಕ್ ಹುಡುಗನ ಹಿಂದೆ ಹೋಗಿದ್ಯಾಕೆ? ಅದಕ್ಕೇ ಹೀಗಾಗಿದೆ ಎಂದವರೂ ಇದ್ದಾರೆ. ಇದರ ನಡುವೆಯೇ ಸಾನಿಯಾ ಮರು ಮದುವೆ ವಿಚಾರವೂ ಹರಿದಾಡುತ್ತಿದೆ.

ಸಾನಿಯಾ ಮಿರ್ಜಾ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ವರಿಸಿದ್ದಾರೆ ಎಂಬ ರೂಮರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಕೆಲವರು ಇಬ್ಬರ ಫೋಟೋವನ್ನು ಎಡಿಟ್ ಮಾಡಿ ಮದುವೆಯಾಗಿದೆ ಎಂದು ನಂಬಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮೊಹಮ್ಮದ್ ಶಮಿ ಕೂಡಾ ಮೊದಲ ಪತ್ನಿಯಿಂದ ದೂರವಾಗಿದ್ದಾರೆ. ಹೀಗಾಗಿ ಈಗ ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂದು ಯಾರೋ ಸುದ್ದಿ ಹಬ್ಬಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್, ಕೊಹ್ಲಿ ರಾಮಮಂದಿರ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?