Select Your Language

Notifications

webdunia
webdunia
webdunia
webdunia

ಮದುವೆಯೂ ಕಷ್ಟ, ವಿಚ್ಛೇದನವೂ ಕಷ್ಟ ಎಂದ ಸಾನಿಯಾ ಮಿರ್ಜಾ

Sania Mirza Shoib Mallik

Krishnaveni K

ಹೈದರಾಬಾದ್ , ಗುರುವಾರ, 18 ಜನವರಿ 2024 (08:20 IST)
ಹೈದರಾಬಾದ್: ಇತ್ತೀಚೆಗಿನ ದಿನಗಳಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು.

ಇದೀಗ ಸಾನಿಯಾ ಮಿರ್ಜಾ ಪ್ರಕಟಿಸಿದ ಗೂಡಾರ್ಥವಿರುವ ಪೋಸ್ಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸಾನಿಯಾ ‘ಮದುವೆ ಕಷ್ಟ, ವಿಚ್ಛೇದನವೂ ಕಷ್ಟ’ ಎಂಬ ಸಂದೇಶ ಬರೆದುಕೊಂಡಿದ್ದಾರೆ.

ಹೀಗಾಗಿ ಸಾನಿಯಾ ಯಾವ ಅರ್ಥದಲ್ಲಿ ಈ ಸಂದೇಶ ಬರೆದಿದ್ದಾರೆ ಎಂಬ ವಿಶ್ಲೇಷಣೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೂ ಸಾನಿಯಾ ಇಂತಹದ್ದೇ ಗೂಡಾರ್ಥವಿರುವ ಪೋಸ್ಟ್ ಮಾಡಿದ್ದಾಗ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು.

ಆದರೆ ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ ಮತ್ತು ಅಲ್ಲಗಳೆದೂ ಇರಲಿಲ್ಲ. ಆದರೆ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವಾಗ ಇಬ್ಬರೂ ಪರಸ್ಪರರ ಫೋಟೋ ಹಾಕಿಕೊಳ್ಳದೇ ಇರುವುದು ಅನುಮಾನ ಹೆಚ್ಚಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

INDvAFG T20I: ಬೆನ್ನು ಬೆನ್ನಿಗೆ ನಾಲ್ಕು ವಿಕೆಟ್ ಡಮಾರ್