ಹೈದರಾಬಾದ್: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಮತ್ತು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಕೆಲವು ಸಮಯದಿಂದ ಹರಿದಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ಚಾಲ್ತಿಗೆ ಬಂದಿದೆ.
ಇತ್ತೀಚೆಗೆ ಇನ್ ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಮಹಿಳೆಯರು ಸೋಲುತ್ತಾರೆ, ಬೀಳುತ್ತಾರೆ ಆದರೆ ಮತ್ತೆ ಎದ್ದು ನಿಲ್ಲುತ್ತಾರೆ. ತಮಗೆ ತಾವೇ ಶಕ್ತಿ ತುಂಬಿಕೊಳ್ಳುತ್ತಾರೆ. ತಮ್ಮ ಮಕ್ಕಳಿಗಾಗಿ ಆಕೆ ಯಾವುದರಿಂದಲೂ ಸೋಲು ಬಾರದಂತೆ ನೋಡಿಕೊಳ್ಳುತ್ತಾಳೆ ಎಂಬರ್ಥದ ಸಾಲುಗಳನ್ನು ಬರೆದುಕೊಂಡಿದ್ದರು. ಈ ಸಾಲುಗಳನ್ನು ಸಾನಿಯಾ ತಮ್ಮ ಒಡಕಿನ ದಾಂಪತ್ಯದ ಬಗ್ಗೆ ಬರೆದಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಇಬ್ಬರೂ ತಮ್ಮ ಮಗ ಇಝಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜೊತೆಯಾಗಿ ಭಾಗಿಯಾಗಿದ್ದರು. ಆದರೆ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರರ ಫೋಟೋ ಹಾಕಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಈಗಾಗಲೇ ದಂಪತಿ ಪರಸ್ಪರ ಬೇರೆಯಾಗಿದ್ದಾರೆ. ಆದರೆ ಮಗನಿಗಾಗಿ ಮಾತ್ರ ಕೆಲವೊಮ್ಮೆ ಒಟ್ಟಿಗೇ ಸಿಗುತ್ತಿದ್ದಾರೆ ಎನ್ನಲಾಗಿದೆ.