Publish Date: Wed, 08 Nov 2023 (17:12 IST)
Updated Date: Wed, 08 Nov 2023 (17:14 IST)
ಬೆಂಗಳೂರು: ಈ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಬೇರೆಯೇ ಬಾಲ್ ನೀಡಲಾಗುತ್ತಿದೆ ಎಂಬ ಪಾಕಿಸ್ತಾನದ ಹಸನ್ ರಾಜಾ ಆರೋಪಕ್ಕೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಪರಾಕಿ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಹಸನ್ ರಾಜಾ ಟಿವಿ ವಾಹಿನಿಯೊಂದರ ಚರ್ಚೆ ವೇಳೆ ಇಂತಹದ್ದೊಂದು ಆಧಾರರಹಿತ ಆರೋಪ ಮಾಡಿದ್ದರು. ಈ ಬಗ್ಗೆ ಸ್ವತಃ ಪಾಕಿಸ್ತಾನದವರೇ ಆದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಭಾರತೀಯ ವೇಗಿ ಮೊಹಮ್ಮದ್ ಶಮಿ ಇನ್ ಸ್ಟಾಗ್ರಾಂ ಮೂಲಕ ಪಾಕ್ ಮಾಜಿ ಕ್ರಿಕೆಟಿಗನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾಚಿಕೆಯಾಗಬೇಕು ನಿಮಗೆ. ಮೊದಲು ನಿಮ್ಮ ಪ್ರದರ್ಶನ ಸುಧಾರಿಸುವತ್ತ ಗಮನ ಹರಿಸಿ. ಇಲ್ಲದೇ ಹೋದರೆ ಇನ್ನೊಬ್ಬರ ಯಶಸ್ಸನ್ನು ನೋಡಿ ಖುಷಿಪಡುವ ಮನೋಭಾವ ಬೆಳೆಸಿಕೊಳ್ಳಿ. ನೀವೂ ಕೂಡಾ ಆಟಗಾರರಾಗಿದ್ದರಲ್ಲವೇ? ವಾಸಿಂ ಭಾಯಿ ವಿವರಿಸಿದ ಮೇಲೂ ಇಂತಹ ಹೇಳಿಕೆ ನೀಡುತ್ತಿದ್ದೀರಾ? ನಿಮ್ಮದೇ ದೇಶದ ಆಟಗಾರ ವಾಸಿಂ ಅಕ್ರಮ್ ಬಗ್ಗೆಯೇ ವಿಶ್ವಾಸವಿಲ್ಲವೇ? ಭಾರತ ಮೋಸ ಮಾಡುತ್ತಿದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.