Publish Date: Wed, 08 Nov 2023 (11:43 IST)
Updated Date: Wed, 08 Nov 2023 (09:28 IST)
ಮುಂಬೈ: ಇನ್ನೇನು ಟೀಂ ಇಂಡಿಯಾದಲ್ಲಿ ಅವಕಾಶವೇ ಇಲ್ಲ ಎಂದು ಕೂತಿದ್ದ ವೇಗಿ ಭುವನೇಶ್ವರ್ ಕುಮಾರ್ ಗೆ ಕೊನೆಯ ಅವಕಾಶವೊಂದು ಸಿಗುವ ಸಾಧ‍್ಯತೆಯಿದೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಬಳಿಕ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ನವಂಬರ್ 23 ರಿಂದ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ಭುವನೇಶ್ವರ್ ಕುಮಾರ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಈ ಸರಣಿಗೆ ಕೊಹ್ಲಿ, ರೋಹಿತ್, ಕುಲದೀಪ್, ಬುಮ್ರಾ ಸೇರಿದಂತೆ ಖಾಯಂ ಆಟಗಾರರಿಗೆ ವಿಶ್ರಾಂತಿ ನೀಡಿ ಕಿರಿಯ ಆಟಗಾರರಿಗೆ ಮಣೆ ಹಾಕಲಾಗುತ್ತದೆ. ಇವರ ಜೊತೆ ವೇಗಿ ಭುವಿ ಕೂಡಾ ಅವಕಾಶ ಪಡೆಯುವ ಸಾಧ‍್ಯತೆಯಿದೆ. ಭುವಿ ಇತ್ತೀಚೆಗೆ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದರು. ಹೀಗಾಗಿ ಮತ್ತೆ ಅವರಿಗೆ ಟೀಂ ಇಂಡಿಯಾ ಕರೆ ಸಿಗುವ ಸಾಧ‍್ಯತೆಯಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.