ಕೋಲ್ಕತ್ತಾ: ದ.ಆಫ್ರಿಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವಾಡಿದ ಬಳಿಕ ಟೀಂ ಇಂಡಿಯಾ ಇನ್ನು ಲೀಗ್ ಹಂತದಲ್ಲಿ ಏಕೈಕ ಪಂದ್ಯವನ್ನು ಬಾಕಿ ಉಳಿಸಿಕೊಂಡಿದೆ.
ಈ ವಿಶ್ವಕಪ್ ಕೂಟದಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗಿ ಒಟ್ಟು 9 ಲೀಗ್ ಪಂದ್ಯಗಳನ್ನು ಆಡುತ್ತವೆ. ಆ ಪೈಕಿ ಟೀಂ ಇಂಡಿಯಾ ಈಗಾಗಲೇ 8 ಪಂದ್ಯಗಳನ್ನು ಆಡಿ ಮುಗಿಸಿದೆ.
ಇದೀಗ ಲೀಗ್ ಹಂತದಲ್ಲಿ ಏಕೈಕ ಪಂದ್ಯ ಬಾಕಿಯಿದ್ದು ಇದು ನವಂಬರ್ 12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಬೇಕಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಇದಾದ ಬಳಿಕ ಅಂತಿಮ ಹಂತದ ಕ್ರಮಾಂಕ ಪಟ್ಟಿ ಬಿಡುಗಡೆಯಾಗಲಿದ್ದು, ಅದರಂತೆ ಸೆಮಿಫೈನಲ್ ಗೆ ಯಾವ ತಂಡಕ್ಕೆ ಯಾವ ತಂಡ ಎದುರಾಳಿ ಎಂದು ಅಧಿಕೃತವಾಗಿ ಪ್ರಕಟವಾಗಲಿದೆ.