Publish Date: Wed, 08 Nov 2023 (09:00 IST)
Updated Date: Wed, 08 Nov 2023 (09:17 IST)
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಇದು ಕೊನೆಯ ಲೀಗ್ ಪಂದ್ಯವಾಗಲಿದೆ.
ಈ ಪಂದ್ಯ ನವಂಬರ್ 12 ರಂದು ಉದ್ಯಾನನಗರಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಆದರೆ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಹವಾಮಾನ ವರದಿ ಪ್ರಕಾರ ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಅದಾದ ಬಳಿಕ ಭಾನುವಾರ ಮೋಡ ಕವಿದ ವಾತಾವರಣವಿರಲಿದೆ. ಹೀಗಾಗಿ ಮಳೆ ಸಾಧ‍್ಯತೆಯೂ ಇಲ್ಲದಿಲ್ಲ. ಈ ವಿಶ್ವಕಪ್ ಕೂಟದಲ್ಲಿ ಭಾರತ ಪಾಲ್ಗೊಳ್ಳುವ ಏಕೈಕ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಆ ಪಂದ್ಯಕ್ಕೂ ಮಳೆಯಾದರೆ ಪ್ರೇಕ್ಷಕರಿಗೆ ತೀವ್ರ ನಿರಾಶೆಯಾಗಲಿದೆ.