Publish Date: Tue, 07 Nov 2023 (11:12 IST)
Updated Date: Tue, 07 Nov 2023 (09:52 IST)
ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಂಜಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿರುವುದು ಬಹು ಚರ್ಚೆಯ ವಿಷಯವಾಗಿದೆ.
ಕ್ರಿಕೆಟ್ ನಿಯಮದ ಪ್ರಕಾರವೇ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಔಟ್ ಗೆ ಮನವಿ ಸಲ್ಲಿಸಿದರೂ ಮಂಕಡ್ ಔಟ್ ನಂತೇ ಇದೂ ಕೂಡಾ ವಿವಾದಕ್ಕೆ ಕಾರಣವಾಗಿದೆ.
ಆದರೆ ಕೆಲವರು ಆಂಜಲೋ ಮ್ಯಾಥ್ಯೂಸ್ ಗೆ 2014 ರ ಘಟನೆಯನ್ನು ನೆನಪಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ರನ್ನು ಆಂಜಲೋ ಮ್ಯಾಥ್ಯೂಸ್ ನಾಯಕತ್ವದ ಲಂಕಾ ತಂಡ ಮಂಕಡ್ ಔಟ್ ಮಾಡಿತ್ತು. ಅಂದು ಲಂಕಾ ತಂಡಕ್ಕೆ ಅದು ನ್ಯಾಯಯುತವಾಗಿಯೇ ಕಂಡಿತ್ತು. ಈಗ ಯಾಕೆ ಟೈಮ್ಡ್ ಔಟ್ ಅನ್ಯಾಯ ಎನಿಸುತ್ತಿದೆ ಎಂದು ಹಲವರು ವ್ಯಂಗ್ಯ ಮಾಡಿದ್ದಾರೆ.