Publish Date: Wed, 08 Nov 2023 (08:30 IST)
Updated Date: Wed, 08 Nov 2023 (09:06 IST)
Photo Courtesy: Whats app
ಮುಂಬೈ: ಅಫ್ಘಾನಿಸ್ತಾನ ವಿರುದ್ಧ ನಿನ್ನೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅತ್ಯದ್ಭುತ ದ್ವಿಶತಕ ಗಳಿಸಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ ವೆಲ್ ಇನಿಂಗ್ಸ್ ಗೆ ಕಾಂತಾರ ಕ್ಲೈಮ್ಯಾಕ್ಸ್ ನ ರೂಪ ನೀಡಲಾಗಿದೆ!
ಕಾಂತಾರ ಸಿನಿಮಾದಲ್ಲಿ ನಾಯಕ ಸೋತು ಮಲಗಿದ್ದಾಗ ದೈವ ಬಂದು ಎಚ್ಚರಿಸಿ ಎದುರಾಳಿಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಅದೇ ರೀತಿ ನಿನ್ನೆ ಗ್ಲೆನ್ ಮ್ಯಾಕ್ಸ್ ವೆಲ್ ಕಾಲು ನೋವಿನಿಂದಾಗಿ ಓಡಲಾಗದೇ ಇನಿಂಗ್ಸ್ ನಡುವೆ ಒಮ್ಮೆ ಮೈದಾನದಲ್ಲೇ ಮಲಗಿದ್ದರು.
ಬಳಿಕ ಫಿಸಿಯೋ ಬಂದು ಚಿಕಿತ್ಸೆ ನೀಡಿದ ಬಳಿಕ ಕಾಲು ನೋವಿದ್ದರೂ ಸಿಕ್ಸರ್, ಬೌಂಡರಿಗಳ ಸಿಡಿಲಬ್ಬರದ ಮೂಲಕವೇ ತಂಡಕ್ಕೆ ಯಾರೂ ಊಹಿಸಿರದ ಜಯ ಕೊಡಿಸಿದರು. ಮ್ಯಾಕ್ಸಿ ಮೈದಾನದಲ್ಲಿ ಅಂಗಾತ್ತಾನೆ ಮಲಗಿರುವ ಚಿತ್ರಕ್ಕೆ ಕಾಂತಾರದ ದೈವ ಬಂದು ಎಚ್ಚರಿಸುವ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು, ಅವರ ಇನಿಂಗ್ಸ್ ನ್ನು ಸಿನಿಮಾ ಕ್ಲೈಮ್ಯಾಕ್ಸ್ ಗೆ ಹೋಲಿಕೆ ಮಾಡಿ ಅಭಿನಂದಿಸಲಾಗಿದೆ.