Publish Date: Wed, 08 Nov 2023 (16:43 IST)
Updated Date: Wed, 08 Nov 2023 (16:44 IST)
ದುಬೈ: ಐಸಿಸಿ ಬಿಡುಗಡೆ ಮಾಡಿರುವ ಲೇಟೆಸ್ಟ್ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದೆ.
ನೂತನ ಬ್ಯಾಟಿಂಗ್ ಲಿಸ್ಟ್ ನಲ್ಲಿ ಭಾರತದ ಶುಬ್ಮನ್ ಗಿಲ್ ನಂ.1 ಬ್ಯಾಟರ್, ಮೊಹಮ್ಮದ್ ಸಿರಾಜ್ ನಂ.1 ಬೌಲರ್ ಆಗಿದ್ದರೆ ತಂಡದ ಪಟ್ಟಿಯಲ್ಲೂ ಟೀಂ ಇಂಡಿಯಾವೇ ನಂ.1 ಆಗಿದೆ. ಗಿಲ್ ಅಲ್ಲದೆ, ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ನಂ.4, ನಾಯಕ ರೋಹಿತ್ ಶರ್ಮಾ 6 ನೇ ಸ್ಥಾನದಲ್ಲಿದ್ದಾರೆ.
ಬೌಲರ್ ಗಳ ಪಟ್ಟಿಯಲ್ಲಂತೂ ಬಹುತೇಕ ಭಾರತೀಯ ಆಟಗಾರರೇ ತುಂಬಿದ್ದಾರೆ. ನಂ.1 ಬೌಲರ್ ಮೊಹಮ್ಮದ್ ಸಿರಾಜ್ ಆಗಿದ್ದರೆ, ಕುಲದೀಪ್ ನಂ.4, ಜಸ್ಪ್ರೀತ್ ಬುಮ್ರಾ 8 ಮತ್ತು ಮೊಹಮ್ಮದ್ ಶಮಿ 10 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 10 ನೇ ಸ್ಥಾನದಲ್ಲಿದ್ದಾರೆ.