Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಶಮಿ

Mohammad Shami

Krishnaveni K

ನವದೆಹಲಿ , ಮಂಗಳವಾರ, 9 ಜನವರಿ 2024 (12:19 IST)
Photo Courtesy: Twitter
ನವದೆಹಲಿ: ಏಕದಿನ ವಿಶ್ವಕಪ್ ಹೀರೋ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಪ್ರತಿಷ್ಠಿತ ಅರ್ಜುನ ಅವಾರ್ಡ್ಸ್ ನೀಡಿ ಗೌರವಿಸಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಕ್ರೀಡಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಟೀಂ ಇಂಡಿಯಾ ಸ್ಟಾರ್ ವೇಗಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ ಗರಿಷ್ಠ ವಿಕೆಟ್ ಟೇಕರ್ ಆಗಿದ್ದ ಮೊಹಮ್ಮದ್ ಶಮಿ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಸಾಧನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ. ಅವರ ಪ್ರಶಸ್ತಿಯನ್ನು ಕೊನೆಯ ಗಳಿಗೆಯಲ್ಲಿ ಬಿಸಿಸಿಐ ಮನವಿ ಮೇರೆಗೆ ಸೇರಿಸಲಾಗಿತ್ತು.

ಭಾರತದಲ್ಲಿ ಕ್ರೀಡೆಗಾಗಿ ನೀಡಲಾಗುವ ಎರಡನೇ ಗರಿಷ್ಠ ಉನ್ನತ ಪ್ರಶಸ್ತಿ ಇದಾಗಿದೆ. 2021 ರಲ್ಲಿ ಶಿಖರ್ ಧವನ್ ಕೊನೆಯ ಬಾರಿಗೆ ಕ್ರಿಕೆಟ್ ಕ್ಷೇತ್ರದಿಂದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಮಿ ಈ ಪ್ರಶಸ್ತಿ ನನ್ನ ಕನಸಾಗಿತ್ತು. ಎಷ್ಟೋ ಜನರಿಗೆ ಈ ಪ್ರಶಸ್ತಿ ಕನಸಾಗಿಯೇ ಉಳಿದಿರುತ್ತದೆ. ಆದರೆ ನನಗೆ ಸ್ವೀಕರಿಸಲು ಸಾ‍ಧ್ಯವಾಗಿದ್ದು ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಜೊತೆ ನಿಂತ ಇಸ್ರೇಲ್: ಲಕ್ಷದ್ವೀಪ ಅಭಿವೃದ್ಧಿಗೆ ಸಾಥ್