Publish Date: Tue, 09 Jan 2024 (11:40 IST)
Updated Date: Tue, 09 Jan 2024 (11:41 IST)
ಆಲಪ್ಪುಳ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಆಲಪ್ಪುಳದಲ್ಲಿ ನಡೆದ ಪಂದ್ಯದ ವೇಳೆ ಕೇರಳ ನಾಯಕ ಸಂಜು ಸ್ಯಾಮ್ಸನ್ ಗೆ ಅಭಿಮಾನಿಗಳು ಪ್ರೀತಿಯಿಂದ ಮುತ್ತಿಗೆ ಹಾಕಿದ್ದಾರೆ.
ಕೇರಳ ಮತ್ತು ಉತ್ತರ ಪ್ರದೇಶ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯದ ಫಲಿತಾಂಶ ಏನೇ ಇರಬಹುದು. ಆದರೆ ಅಭಿಮಾನಿಗಳಿಗೆ ತಮ್ಮ ತವರಿನ ಹೀರೋ ಸಂಜು ಸ್ಯಾಮ್ಸನ್ ರನ್ನು ನೋಡಲೆಂದೇ ಪ್ರೇಕ್ಷಕರು ಬಂದಿದ್ದರು.
ಅಭಿಮಾನಿಗಳಿಗೆ ಸಂಜು ನಿರಾಸೆ ಮಾಡಲಿಲ್ಲ. ಮೊದಲ ಇನಿಂಗ್ಸ್ ಬಂದ ಬಾಲ್ ಗೇ ಸಿಕ್ಸರ್ ಸಿಡಿಸಿ ಬಳಿಕ 35 ರನ್ ಗಳಿಸಿ ರಂಜಿಸಿದರು. ಸಂಜು ಹೊಡೆದ ಪ್ರತೀ ರನ್ ಗೆ ಪ್ರೇಕ್ಷಕರು ವಿಶಲ್ ಹೊಡೆಯುತ್ತಿದ್ದರು.
ಇನ್ನು, ಸಂಜು ಸ್ಯಾಮ್ಸನ್ ರನ್ನು ನೋಡಲೆಂದೇ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಅವರನ್ನು ಸಂಜು ಕೂಡಾ ನಿರಾಸೆ ಮಾಡಲಿಲ್ಲ. ಇವರಲ್ಲಿ ವಿಶೇಷ ಚೇತನ ಅಭಿಮಾನಿಯೂ ಸೇರಿದ್ದರು. ಗ್ಯಾಲರಿಯತ್ತ ಬಂದ ಸಂಜು ಎಲ್ಲರನ್ನೂ ಮಾತನಾಡಿಸಿ ಸೆಲ್ಫೀ, ಅಟೋಗ್ರಾಫ್ ಕೊಟ್ಟು ಖುಷಿಪಡಿಸಿದರು.