Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಅವಗಣನೆ: ಫ್ಯಾನ್ಸ್ ಆಕ್ರೋಶ

KL Rahul

Krishnaveni K

ಮುಂಬೈ , ಸೋಮವಾರ, 8 ಜನವರಿ 2024 (10:45 IST)
ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾ ಆಟಗಾರರನ್ನು ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಆದರೆ ಈ ತಂಡದಿಂದ ಪ್ರಮುಖ ಆಟಗಾರ ಕೆಎಲ್ ರಾಹುಲ್ ರನ್ನು ಕೈ ಬಿಟ್ಟಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಕಳೆದ ಏಕದಿನ ವಿಶ್ವಕಪ್ ನಲ್ಲಿ ಆಪತ್ಬಾಂಧವನಂತೆ ಆಡಿದ್ದರು. ಇತ್ತೀಚೆಗೆ ಅವರು ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಸಹಾಯಕ್ಕೆ ಬರುತ್ತಿದ್ದಾರೆ.

ಹಾಗಿದ್ದರೂ ಅವರನ್ನು ತಂಡದಿಂದ ಹೊರಗಿಟ್ಟಿದ್ದೇಕೆ? ಈ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅಥವಾ ಜಿತೇಶ‍್ ಶರ್ಮಾ ಕ್ಲಿಕ್ ಆದರೆ ಟಿ20 ವಿಶ್ವಕಪ್ ತಂಡದಿಂದ ರಾಹುಲ್ ರನ್ನು ಹೊರಗಿಡುತ್ತೀರಾ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡಕ್ಕಾಗಿ ಆಡುವ ಆಟಗಾರರಿಗೆ ಇಷ್ಟೇ ಬೆಲೆಯೇ? ರಾಹುಲ್ ರನ್ನು ಟಿ20 ವಿಶ್ವಕಪ್ ತಂಡದಿಂದ ರಾಹುಲ್ ರನ್ನು ಹೊರಗಿಟ್ಟರೆ ತಕ್ಕ ಬೆಲೆ ತೆರಬೇಕಾದೀತು ಎಂದಿದ್ದಾರೆ. ಆದರೆ ರಾಹುಲ್ ರನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಆಯ್ಕೆಗಾರರು ಸೂಕ್ತ ಕಾರಣವನ್ನೂ ನೀಡದೇ ಇರುವುದು ಈ ಎಲ್ಲಾ ಕನ್ ಫ್ಯೂಷನ್ ಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

14 ತಿಂಗಳ ಬಳಿಕ ಟಿ20 ಗೆ ರೋಹಿತ್, ಕೊಹ್ಲಿ ಕಮ್ ಬ್ಯಾಕ್: ಫ್ಯಾನ್ಸ್ ಗೆ ಹಬ್ಬ