Publish Date: Sun, 07 Jan 2024 (12:23 IST)
Updated Date: Sun, 07 Jan 2024 (12:27 IST)
ಮುಂಬೈ: ಭಾರತವನ್ನು ಕಳಪೆ ತಂಡ ಎಂದಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಗೆ ಟೀಂ ಇಂಡಿಯಾ ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಹೀನಾಯವಾಗಿ ಸೋತ ಬಳಿಕ ಮೈಕಲ್ ವಾನ್ ಭಾರತ ಕಳಪೆ ತಂಡ. ಎಲ್ಲಾ ಇದ್ದೂ ಪ್ರಮುಖ ಟೂರ್ನಿಗಳಲ್ಲಿ ಸೋಲುತ್ತಲೇ ಬಂದಿದೆ. ಕೆಲವು ವರ್ಷಗಳಿಂದ ಐಸಿಸಿ ಟೂರ್ನಿಯನ್ನೇ ಗೆದ್ದಿಲ್ಲ ಎಂದು ವ್ಯಂಗ್ಯ ಮಾಡಿದ್ದರು.
ಇದಕ್ಕೆ ಈಗ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಅಶ್ವಿನ್ ತಿರುಗೇಟು ನೀಡಿದ್ದಾರೆ. ಭಾರತ ಐಸಿಸಿ ಟೂರ್ನಿಗಳನ್ನು ಗೆಲ್ಲದೆ ಕೆಲವು ವರ್ಷವಾಗಿರಬಹುದು. ಆದರೆ ಹಾಗಂತ ನಾವು ಕಳಪೆ ತಂಡವಲ್ಲ ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನಾವು ಐಸಿಸಿ ಟೂರ್ನಿ ಗೆಲ್ಲದೇ ಇರಬಹುದು. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದೇವೆ. ಒಂದು ವೇಳೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದ್ದರೆ 65 ರನ್ ಗೆ ಆಲೌಟ್ ಆಗುತ್ತಿತ್ತೇನೋ. ಆದರೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಜೊತೆಯಾಟಕ್ಕೆ ಧನ್ಯವಾದ ಹೇಳಲೇಬೇಕು ಎಂದಿದ್ದಾರೆ.