Publish Date: Sun, 07 Jan 2024 (08:30 IST)
Updated Date: Sun, 07 Jan 2024 (08:56 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಟೀಂ ಇಂಡಿಯಾ ಈಗಾಗಲೇ ಪ್ರಯೋಗಗಳನ್ನು ನಡೆಸುತ್ತಿದೆ.
ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಇದೇ ನಿಟ್ಟಿನಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಾಧ‍್ಯತೆಯಿದೆ. ಒಟ್ಟಾರೆಯಾಗಿ ಮುಂದಿನ ವಿಶ್ವಕಪ್ ಗೆ ಮುನ್ನ ಸುಮಾರು 20-25 ಆಟಗಾರರನ್ನು ರೆಡಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ಈಗಾಗಲೇ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತು ಆಯ್ಕೆಗಾರರು ಕೆಲವು ಯುವ ಆಟಗಾರರ ಕಡೆಗೆ ಗಮನ ನೆಟ್ಟಿದ್ದಾರೆ. ಈ ಆಟಗಾರರು ಮುಂಬರುವ ಆಫ್ಘನ್ ವಿರುದ್ಧದ ಟಿ20 ಸರಣಿ ಮತ್ತು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ತಂಡಕ್ಕೆ ಟಿಕೆಟ್ ಪಡೆಯಲಿದ್ದಾರೆ.
ಹೀಗಾಗಿ ಈ ಬಾರಿಯ ಐಪಿಎಲ್ ಮತ್ತು ಅಫ್ಘಾನಿಸ್ತಾನ ಟಿ20 ಸರಣಿ ಟೀಂ ಇಂಡಿಯಾದ ಯುವ ಆಟಗಾರರ ಪಾಲಿಗೆ ಮಹತ್ವದ್ದಾಗಲಿದೆ.