Select Your Language

Notifications

webdunia
webdunia
webdunia
webdunia

ಕೊಹ್ಲಿ, ರೋಹಿತ್ ಗೆ ಟಿ20 ವಿಶ್ವಕಪ್ ಆಡುವಾಸೆ: ಬಿಸಿಸಿಐಗೆ ಹೊಸ ತಲೆನೋವು

ಕೊಹ್ಲಿ, ರೋಹಿತ್ ಗೆ ಟಿ20 ವಿಶ್ವಕಪ್ ಆಡುವಾಸೆ: ಬಿಸಿಸಿಐಗೆ ಹೊಸ ತಲೆನೋವು
ಮುಂಬೈ , ಬುಧವಾರ, 3 ಜನವರಿ 2024 (10:29 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡುವ ಬಯಕೆ ಹೊಂದಿದ್ದಾರೆ. ಇದು ಬಿಸಿಸಿಐಗೆ ಹೊಸ ತಲೆನೋವು ತಂದಿದೆ.

ಟಿ20 ವಿಶ್ವಕಪ್ ಗೆ ಯುವ ಕ್ರಿಕೆಟಿಗರ ತಂಡ ಕಟ್ಟುವ ಯೋಜನೆ ಬಿಸಿಸಿಐಯದ್ದಾಗಿತ್ತು. ಈ ನಿಟ್ಟಿನಲ್ಲಿ ಮುಂಬರುವ ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿಗೆ ಯುವ ತಂಡವನ್ನೇ ಆಯ್ಕೆ ಮಾಡಲು ಚಿಂತನೆ ನಡೆಸಿತ್ತು.

ಆದರೆ ಈಗ ಕೊಹ್ಲಿ ಮತ್ತು ರೋಹಿತ್ ಟಿ20 ವಿಶ್ವಕಪ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ತಂಡ ಆಯ್ಕೆ ಮಾಡುವಾಗ ಯಾರನ್ನು ಆಯ್ಕೆ ಮಾಡುವುದು, ಬಿಡುವುದು ಎಂಬ ಹೊಸ ತಲೆನೋವಾಗಿದೆ.

ಟಿ20 ವಿಶ್ವಕಪ್ ಆಡುವ ಸಂಭಾವ್ಯ ತಂಡವನ್ನೇ ಪ್ರಯೋಗದ ದೃಷ್ಟಿಯಿಂದ ಅಫ್ಘಾನಿಸ್ತಾನ ಸರಣಿಗೂ ಆಯ್ಕೆ ಮಾಡಬೇಕಿದೆ. ಆದರೆ ಕೊಹ್ಲಿ, ರೋಹಿತ್ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಲಭ್ಯರಿರುತ್ತಾರೋ ಎನ್ನುವುದೂ ಸ್ಪಷ್ಟವಾಗಿಲ್ಲ. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಹೀಗಾಗಿ ಟಿ20 ವಿಶ್ವಕಪ್ ತಂಡದ ಆಯ್ಕೆ  ವಿಚಾರ ಐಪಿಎಲ್ ನ ಮೊದಲ ಭಾಗದಲ್ಲಿ ಹೇಗಿರುತ್ತದೆ ಎಂಬುದನ್ನು ಅವಲಂಬಿಸಿರಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

INDvsSA test: ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಾಡಬಹುದಾದ ಬದಲಾವಣೆಗಳು