Select Your Language

Notifications

webdunia
webdunia
webdunia
webdunia

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿ
ಕೇಪ್ ಟೌನ್ , ಮಂಗಳವಾರ, 2 ಜನವರಿ 2024 (10:00 IST)
ಕೇಪ್ ಟೌನ್: ಭಾರತದ ವಿರುದ್ಧ ನಾಳೆ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ದ.ಆಫ್ರಿಕಾ ಗ್ರೀನ್ ಪಿಚ್ ಸಿದ್ಧಪಡಿಸಿದ್ದು, ಮತ್ತೆ ಬೌನ್ಸ್ ಆಗುವ ನಿರೀಕ್ಷೆಯಿದೆ. ಇದು ಮತ್ತೆ ಭಾರತಕ್ಕೆ ಭಯ ಹುಟ್ಟಿಸಿದೆ.

ಮೊದಲ ಟೆಸ್ಟ್ ಸೆಂಚೂರಿಯನ್ ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ವೇಗಿಗಳ ದಾಳಿಗೆ ಭಾರತದ ಬ್ಯಾಟಿಂಗ್ ಸಂಪೂರ್ಣ ಹಳಿತಪ್ಪಿತ್ತು.

ಇದೀಗ ಎರಡನೇ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾಗೆ ವೇಗದ ಪಿಚ್ ಭಯ ಹುಟ್ಟಿಸಿದೆ. ಕೇಪ್ ಟೌನ್ ಮೈದಾನದ ಪಿಚ್ ನಲ್ಲಿ ಬೌನ್ಸ್ ಮತ್ತು ಸ್ವಿಂಗ್ ಆಗುವ ನಿರೀಕ್ಷೆಯಿದ್ದು, ಸಂಪೂರ್ಣವಾಗಿ ವೇಗದ ಬೌಲರ್ ಗೆ ಅನುಕೂಲಕಾರಿಯಾಗಿ ನಿರ್ಮಿಸಲಾಗಿದೆ.

ಹೀಗಾಗಿ ಮತ್ತೆ ಟಾಸ್ ನಿರ್ಣಾಯಕವಾಗಲಿದೆ. ಆದರೆ ಕೊನೆಯ ಎರಡು ದಿನ ಸ್ಪಿನ್ನರ್ ಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಿಕೊಂಡರೆ ಸೂಕ್ತವೆನಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್