Publish Date: Sun, 31 Dec 2023 (10:47 IST)
Updated Date: Sun, 31 Dec 2023 (10:49 IST)
ಕೇಪ್ ಟೌನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಮಗಳು ಸಮೈರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ತಾವೇ ಮಗುವಾಗಿದ್ದಾರೆ.
ಟೆಸ್ಟ್ ಸರಣಿ ಆಡಲು ದ.ಆಫ್ರಿಕಾದಲ್ಲಿರುವ ರೋಹಿತ್ ಶರ್ಮಾ ಜೊತೆಗೆ ಪತ್ನಿ ರಿತಿಕಾ, ಮಗಳು ಸಮೈರಾ ಕೂಡಾ ಇದ್ದಾರೆ. ನಿನ್ನೆ ಸಮೈರಾ ಹುಟ್ಟುಹಬ್ಬವಾಗಿದ್ದು, ಟೀಂ ಇಂಡಿಯಾದ ತಮ್ಮ ಗೆಳೆಯರ ಜೊತೆಗೆ ರೋಹಿತ್ ಬರ್ತ್ ಡೇ ಪಾರ್ಟಿ ಮಾಡಿಕೊಂಡಿದ್ದಾರೆ.
ವಿಶೇಷವೆಂದರೆ ಮಗಳ ಜೊತೆಗೆ ಟಾಯ್ ಟ್ರೈನ್ ನಲ್ಲಿ ಓಡಾಡಿ ಮಗುವಿನಂತೆ ಖುಷಿಪಟ್ಟಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ಕ್ಷಣಗಳನ್ನು ರಿತಿಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ-ರಿತಿಕಾ ಸಜ್ ದೇ ದಂಪತಿಯ ಮುದ್ದಿನ ಮಗಳು ಸಮೈರಾ ಜನಿಸಿದ್ದು 2018 ರ ಡಿಸೆಂಬರ್ 30 ರಂದು. ಆಕೆಗೆ ಈಗ ಐದನೇ ವರ್ಷದ ಹುಟ್ಟಹಬ್ಬದ ಸಂಭ್ರಮ.