Select Your Language

Notifications

webdunia
webdunia
webdunia
webdunia

INDvsSA test: ಟೀಂ ಇಂಡಿಯಾಗೆ ಆಫ್ರಿಕಾ ದಿಟ್ಟ ಉತ್ತರ

INDvsSA test: ಟೀಂ ಇಂಡಿಯಾಗೆ ಆಫ್ರಿಕಾ ದಿಟ್ಟ ಉತ್ತರ
ಸೆಂಚೂರಿಯನ್ , ಬುಧವಾರ, 27 ಡಿಸೆಂಬರ್ 2023 (16:42 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಗಳಿಸಿದ 245 ರನ್ ಗಳಿಗೆ ಉತ್ತರವಾಗಿ ಆಫ್ರಿಕಾ ಎರಡನೇ ದಿನದ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ.

ನಿನ್ನೆ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತದ ಪರ ಇಂದು ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದರು. ಸಂಕಷ್ಟದ ಸಮಯದಲ್ಲಿ ರಾಹುಲ್ ಬ್ಯಾಟ್ ನಿಂದ ಸಿಡಿದ ಅಮೂಲ್ಯ ಇನಿಂಗ್ಸ್ ಇದಾಗಿತ್ತು. ಒಟ್ಟು 137 ಎಸೆತ ಎದುರಿಸಿದ ಅವರು 4 ಸಿಕ್ಸರ್ 14 ಬೌಂಡರಿ ಸಹಿತ 101 ರನ್ ಗಳಿಸಿ ಕೊನೆಯವರಾಗಿ ಔಟಾದರು. ಆಫ್ರಿಕಾ ಪರ ಕಗಿಸೊ ರಬಾಡ 5 ವಿಕೆಟ್, ನಾಂಡ್ರೆ ಬರ್ಗರ್ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಆಫ್ರಿಕಾಗೆ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಬ್ರೇಕ್ ಥ್ರೂ ನೀಡಿದರು. ಆಡಂ ಮಾರ್ಕರಮ್ 5 ರನ್ ಗಳಿಸಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೀಗ ಆಫ್ರಿಕಾ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು 196 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯಲ್ಲಿ ಇಲ್ಲಿನವರಿಗೆ ಅವಕಾಶವೇ ಕೊಡಲ್ಲ ಎಂದ ರಾಬಿನ್ ಉತ್ತಪ್ಪ