ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಕೆಸಿಸಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಮಾನಿಗಳೊಂದಿಗೆ ಮಾತನಾಡಿದ ವಿಡಿಯೋವೊಂದು ಈಗ ಸಖತ್ ವೈರಲ್ ಆಗಿದೆ.
ಕೆಸಿಸಿ ಟೂರ್ನಿ ನೋಡಲು ಬಂದಿದ್ದ ಅಭಿಮಾನಿಗಳು ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ರಾಬಿನ್ ಉತ್ತಪ್ಪರನ್ನು ಮಾತನಾಡಿಸಿದರು. ಉತ್ತಪ್ಪ ಆರ್ ಸಿಬಿಗೆ ಬಾ ಎಂದು ಅಭಿಮಾನಿಗಳು ಕರೆದಿದ್ದಾರೆ.
ಅದನ್ನು ಕೇಳಿಸಿಕೊಂಡು ಗ್ಯಾಲರಿ ಬಳಿ ಬಂದ ರಾಬಿನ್ ಉತ್ತಪ್ಪ ನಗುತ್ತಲೇ ಆರ್ ಸಿಬಿಯಲ್ಲಿ ಇಲ್ಲಿನವರನ್ನು ಸೇರಿಸಿಕೊಳ್ಳಲ್ಲ ಎಂದು ಉತ್ತರಿಸಿದ್ದಾರೆ. ಅವರ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರು ಇರುವುದೇ ಅಪರೂಪ. ಕನ್ನಡಿಗರನ್ನು ಕಡೆಗಣಿಸಲಾಗುತ್ತದೆ ಎಂಬ ಆರೋಪವೂ ಇದೆ. ಇದೀಗ ಉತ್ತಪ್ಪ ನಗುತ್ತಲೇ ಈ ರೀತಿ ಹೇಳಿದರೂ ಇದೇ ವಾಸ್ತವ ಎಂದು ಒಪ್ಪಿಕೊಳ್ಳಲೇಬೇಕು.