Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯ ಐಪಿಎಲ್ ಗೆ ಡೌಟ್: ರೋಹಿತ್ ಶರ್ಮಾ ಫ್ಯಾನ್ಸ್ ಸಂಭ್ರಮ

ಹಾರ್ದಿಕ್ ಪಾಂಡ್ಯ ಐಪಿಎಲ್ ಗೆ ಡೌಟ್: ರೋಹಿತ್ ಶರ್ಮಾ ಫ್ಯಾನ್ಸ್ ಸಂಭ್ರಮ
ಮುಂಬೈ , ಭಾನುವಾರ, 24 ಡಿಸೆಂಬರ್ 2023 (10:40 IST)
ಮುಂಬೈ: ಗಾಯದ ಕಾರಣದಿಂದ ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ ನಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ.

ವಿಶ್ವಕಪ್ ವೇಳೆಗೆ ಪಾದದ ನೋವಿಗೊಳಗಾಗಿದ್ದ ಹಾರ್ದಿಕ್ ಪಾಂಡ್ಯ ಇನ್ನೂ ಚೇತರಿಸಿಕೊಂಡಿಲ್ಲ. ಅವರು  ಸಂಪೂರ್ಣವಾಗಿ ಫಿಟ್ನೆಸ್ ಮರಳಿ ಪಡೆಯಲು ಇನ್ನೂ 2-3 ತಿಂಗಳು ಬೇಕು ಎನ್ನಲಾಗುತ್ತಿದೆ.

ಹೀಗಿರುವಾಗ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಮೂಡಿದೆ. ರೋಹಿತ್ ಶರ್ಮಾಗೇ ಮರಳಿ ನಾಯಕತ್ವ ಸಿಗುತ್ತದೆಯೇ ಅಥವಾ ಬುಮ್ರಾಗೆ ಪಟ್ಟ ಕಟ್ಟಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.

ಆದರೆ ಪಾಂಡ್ಯ ಐಪಿಎಲ್ ಗೆ ಅನುಮಾನ ಎಂಬ ಸುದ್ದಿ ಬರುತ್ತಿದ್ದಂತೇ ಸೋಷಿಯಲ್ ಮೀಡಿಯಾಗಳಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮತ್ತೆ ರೋಹಿತ್ ನಾಯಕತ್ವ ವಹಿಸಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಪಾಂಡ್ಯ ಬೆಡ್ ಮೇಲೆ ಮಲಗಿರುವ ಮೆಮೆ ಮಾಡಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ ಮೆಂಟ್ ನ ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಏಳು ವಾರ ಕ್ರಿಕೆಟ್ ಆಡೋ ಹಾಗಿಲ್ಲ ಸೂರ್ಯಕುಮಾರ್ ಯಾದವ್