Publish Date: Sun, 24 Dec 2023 (08:45 IST)
Updated Date: Sun, 24 Dec 2023 (08:45 IST)
ಮುಂಬೈ: ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಇನ್ನು ಏಳು ವಾರಗಳ ಕಾಲ ಕ್ರಿಕೆಟ್ ಆಡೋ ಹಾಗಿಲ್ಲ!
ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಸೂರ್ಯ ಕಾಲುನೋವಿಗೊಳಗಾಗಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸೂರ್ಯ ಕಾಲು ಟ್ವಿಸ್ಟ್ ಮಾಡಿಕೊಂಡಿದ್ದರು.
ಪರಿಣಾಮ ಅವರು ತವರಿಗೆ ಮರಳಿ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದರು. ಇದೀಗ ಅವರ ಗಾಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸುಮಾರು ಏಳು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ ನಡೆಯಲಿದೆ. ಆ ವೇಳೆ ಅವರು ತಂಡದ ಭಾಗವಾಗುವುದು ಅನುಮಾನ. ಸದ್ಯಕ್ಕೆ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.