Publish Date: Sat, 23 Dec 2023 (09:55 IST)
Updated Date: Sat, 23 Dec 2023 (10:13 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಂದಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ವಿರುದ್ಧ ಈಗ ಭಾರೀ ಟೀಕೆ ಕೇಳಿಬಂದಿದೆ.
ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಇಶಾನ್ ಕೊನೆಯ ಕ್ಷಣದಲ್ಲಿ ಕೌಟುಂಬಿಕ ಕಾರಣ ನೀಡಿ ತಂಡದಿಂದ ಹೊರ ನಡೆದಿದ್ದರು. ಅವರ ಬದಲಿಗೆ ಕೆ.ಎಸ್. ಭರತ್ ಗೆ ಅವಕಾಶ ನೀಡಲಾಗಿತ್ತು.
ಇಶಾನ್ ಕೌಟುಂಬಿಕ ಕಾರಣ ನೀಡಿದಾಗ ಎಲ್ಲರೂ ಏನೋ ತುರ್ತು ಇರಬೇಕು ಎಂದುಕೊಂಡಿದ್ದರು. ಆದರೆ ಟೆಸ್ಟ್ ಸರಣಿಗೆ ಗೈರಾಗಿರುವ ಇಶಾನ್ ಇದೀಗ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ.
ರಾಷ್ಟ್ರೀಯ ತಂಡ ಪ್ರತಿನಿಧಿಸುವ ಅವಕಾಶ ಸಿಗುವುಗೇ ಗೌರವ. ಆದರೆ ಅದನ್ನು ಬಿಟ್ಟು ರಿಯಾಲಿಟಿ ಶೋಗೆ ತೆರಳಿದ್ದಕ್ಕೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ದೇಶದ ಕರ್ತವ್ಯಕ್ಕಿಂತಲೂ ರಿಯಾಲಿಟಿ ಶೋ ಹೆಚ್ಚಾಯಿತೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.