ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ‍್ಯಾ ಬಚ್ಚನ್ ಶಾಲಾ ವಾರ್ಷಿಕೋತ್ಸವದಲ್ಲಿ ಮಾಡಿದ ರೂಪಕವೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರಾಧ್ಯ ಓದುತ್ತಿರುವ ಧೀರೂಭಾಯಿ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ನಿನ್ನೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರಿನ್ಸೆನ್ ವೇಷ ಹಾಕಿಕೊಂಡು ವೇದಿಕೆ ಮೇಲೆ ಆರಾಧ್ಯ ಡ್ರಾಮಾ ಮಾಡುತ್ತಿದ್ದರೆ, ಅಮ್ಮ ಐಶ್ವರ್ಯಾ ವಿಡಿಯೋ ಮಾಡುತ್ತಿದ್ದರು.
ವಿಶೇಷವೆಂದರೆ ಆರಾಧ‍್ಯ ಪ್ರಿನ್ಸೆನ್ ವೇಷ ಹಾಕಿಕೊಂಡಾಗ ಥೇಟ್ ಅಮ್ಮನಂತೇ ಕಾಣುತ್ತಿದ್ದಳು. ಐಶ್ವರ್ಯಾ ಸಣ್ಣ ವಯಸ್ಸಿನಲ್ಲಿದ್ದಂತೇ ಆರಾಧ‍್ಯ ಕೂಡಾ ಕಾಣಿಸುತ್ತಿದ್ದಳು. ಜೊತೆಗೆ ಸದಾ ಹಣೆ ಮುಚ್ಚುವಂತೆ ಹೇರ್ ಸ್ಟೈಲ್ ಮಾಡುವ ಆರಾಧ್ಯ ನಿನ್ನೆ ಪ್ರಿನ್ಸೆನ್ ವೇಷಕ್ಕಾಗಿ ಹಣೆ ಕಾಣುವಂತೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಳು.
ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೊನೆಗೂ ಆರಾಧ್ಯ ಹಣೆ ದರ್ಶನ ಮಾಡಿಸಿ ಕ್ರೆಡಿಟ್ ಧೀರೂಭಾಯಿ ಶಾಲೆಗೆ ಸೇರಬೇಕು ಎಂದು ಕೆಲವರು ಕಾಲೆಳೆದಿದ್ದಾರೆ.