ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದೆ.
ಅಮಿತಾಭ‍್ ಇತ್ತೀಚೆಗೆ ತಮ್ಮ ಮಗಳು ಶ್ವೇತಾಗೆ ತಮ್ಮ ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಅದರ ಬೆನ್ನಲ್ಲೇ ಸೊಸೆ ಐಶ್ವರ್ಯಾ ಮತ್ತು ಮಗ ಅಭಿಷೇಕ್ ಬಚ್ಚನ್ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಆದರೆ ವದಂತಿಗಳ ಬೆನ್ನಲ್ಲೇ ಅಭಿ-ಐಶ್ ಮಗಳು ಆರಾಧ‍್ಯ ಜೊತೆ ಅಗಸ್ತ್ಯಾ ನಂದಾ ಅಭಿನಯದ ದಿ ಆರ್ಚೀಸ್ ಸಿನಿಮಾ ಈವೆಂಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡು ವದಂತಿಗಳು ತೆರೆ ಎಳೆದಿದ್ದರು. ಆದರೆ ಇದೀಗ ಅಮಿತಾಭ್ ಮಾಡಿರುವ ಟ್ವೀಟ್ ಮತ್ತೆ ವಿಚ್ಛೇದನದ ಗುಮಾನಿ ಹಬ್ಬಿಸಿದೆ.
ಎಲ್ಲವನ್ನೂ ಹೇಳಿದೆ.. ಎಲ್ಲವನ್ನೂ ಮಾಡಿದೆ ಎಂದು ವೇದಾಂತಿಯಂತೆ ಸೋಷಿಯಲ್ ಮೀಡಿಯಾದಲ್ಲಿ ಅಮಿತಾಭ್ ಒಂದು ಸಾಲು ಬರೆದಿದ್ದಾರೆ. ಇದನ್ನು ನೋಡಿದರೆ ಮತ್ತೆ ತಮ್ಮ ಕೌಟುಂಬಿಕ ವಿಚಾರದ ಬಗ್ಗೆಯೇ ಈ ರೀತಿ ಪರೋಕ್ಷವಾಗಿ ಬರೆದುಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.