Select Your Language

Notifications

webdunia
webdunia
webdunia
Tuesday, 1 April 2025
webdunia

ಅಂತೆ, ಕಂತೆಗಳ ನಡುವೆ ಆರಾಧ್ಯ ಶಾಲೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್-ಐಶ್ವರ್ಯಾ

ಅಭಿಷೇಕ್ ಬಚ್ಚನ್
ಮುಂಬೈ , ಶನಿವಾರ, 16 ಡಿಸೆಂಬರ್ 2023 (09:50 IST)
ಮುಂಬೈ: ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನ ವದಂತಿಗಳ ನಡುವೆಯೇ ಮತ್ತೊಮ್ಮೆ ದಂಪತಿ ಮಗಳು ಆರಾಧ‍್ಯ ಶಾಲೆ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಕೆಲವು ದಿನಗಳ ಮೊದಲು ಅಭಿಷೇಕ್ ಮತ್ತು ಐಶ್ವರ್ಯಾ ಸದ್ಯದಲ್ಲೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ನಿನ್ನೆ ಐಶ್ವರ್ಯಾ ಅತ್ತೆ ಜಯಾ ಬಚ್ಚನ್ ಮತ್ತು ಮಾವ ಅಮಿತಾಭ್ ಬಚ್ಚನ್ ಜೊತೆಗಿನ ವೈಮನಸ್ಯದಿಂದಾಗಿ ಗಂಡನ ಮನೆ ತೊರೆದಿದ್ದಾರೆ ಎಂಬ ಸುದ್ದಿ ಹರಡಿತ್ತು.

ಇವೆಲ್ಲಾ ಅಂತೆ, ಕಂತೆಗಳ ನಡುವೆ ದಂಪತಿ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಆರಾಧ್ಯ ಬಚ್ಚನ್ ಓದುತ್ತಿರುವ ಧೀರೂಭಾಯಿ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವವಿತ್ತು. ಈ ಕಾರ್ಯಕ್ರಮದಲ್ಲಿ ಆರಾಧ್ಯ ಕೂಡಾ ಕಾರ್ಯಕ್ರಮ ನೀಡಿದ್ದಳು. ಮಗಳ ಕಾರ್ಯಕ್ರಮ ನೋಡಲು ದಂಪತಿ ಜೊತೆಯಾಗಿ ಬಂದಿದ್ದು, ಖುಷಿ ಖುಷಿಯಾಗಿಯೇ ಎಲ್ಲರನ್ನೂ ಮಾತನಾಡಿಸಿಕೊಂಡು ತೆರಳಿದ್ದಾರೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಕೂಡಾ ಆಗಮಿಸಿದ್ದರು.

ಇದಕ್ಕೆ ಮೊದಲು ಕಳೆದ ವಾರ ಐಶ್ವರ್ಯಾ, ಗಂಡ, ಮಗಳು, ಮಾವ ಸೇರಿದಂತೆ ಇಡೀ ಕುಟುಂಬದವರ ಜೊತೆ ದಿ ಆರ್ಚೀಸ್ ಸಿನಿಮಾ ಪ್ರದರ್ಶನದ ವೇಳೆ ಕಾಣಿಸಿಕೊಂಡಿದ್ದರು. ಸಾರ್ವಜನಿಕವಾಗಿ ಒಟ್ಟಿಗೇ ಇದ್ದರೂ ಇಬ್ಬರ ದಾಂಪತ್ಯ ಜೀವನದ ಬಗ್ಗೆ ಪ್ರತಿನಿತ್ಯ ರೂಮರ್ ಗಳು ಬರುತ್ತಲೇ ಇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಟ್ರೈಲರ್ ಲಾಂಚ್ ಇಂದು: ಡಿಬಾಸ್ ಅಭಿಮಾನಿಗಳಿಗೆ ಇಂದು ಹಬ್ಬ