ಮುಂಬೈ: ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಗಳಿಂದ ತುರ್ತಾಗಿ ತವರಿಗೆ ಮರಳಿದ್ದರು.
									
			
			 
 			
 
 			
					
			        							
								
																	ಅವರು ದಿಡೀರ್ ಭಾರತಕ್ಕೆ ವಾಪಸ್ ಆಗಲು ನಿಖರ ಕಾರಣವೇನೆಂದು ಬಹಿರಂಗವಾಗಿಲ್ಲ. ಆದರೆ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿರಲಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
									
										
								
																	ವಿರಾಟ್ ಕೊಹ್ಲಿ ತವರಿಗೆ ಮರಳಿದರೂ ಬಿಸಿಸಿಐ ಯಾವುದೇ ಬದಲಿ ಆಟಗಾರನನ್ನು ಘೋಷಿಸಿಲ್ಲ. ಹೀಗಾಗಿ ಕೊಹ್ಲಿ ಡಿಸೆಂಬರ್ 26 ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ತಂಡಕ್ಕೆ ಲಭ್ಯರಿರಲಿದ್ದಾರೆ ಎಂಬ ಮಾಹಿತಿಯಿದೆ.
									
											
							                     
							
							
			        							
								
																	ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲಲು ಹೊರಟಿರುವ ಭಾರತಕ್ಕೆ ಇದು ಶುಭ ಸುದ್ದಿ. ಈಗಾಗಲೇ ಋತುರಾಜ್ ಗಾಯಕ್ ವಾಡ್, ಮೊಹಮ್ಮದ್ ಶಮಿ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ಕೊಹ್ಲಿ ಕೂಡಾ ಗೈರಾದರೆ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.