Publish Date: Fri, 22 Dec 2023 (11:00 IST)
Updated Date: Fri, 22 Dec 2023 (11:16 IST)
ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಆಫ್ರಿಕಾ ಬ್ಯಾಟರ್ ಕೇಶವ್ ಮಹಾರಾಜ್ ರನ್ನು ವಿಕೆಟ್ ಹಿಂದುಗಡೆ ನಿಂತು ಕೆಎಲ್ ರಾಹುಲ್ ಕಿಚಾಯಿಸಿದ ಘಟನೆ ನಡೆದಿದೆ.
ಭಾರತೀಯ ಮೂಲದ ಕೇಶವ್ ಮಹಾರಾಜ್ ಕ್ರೀಸ್ ಗೆ ಬಂದಾಗ ಆದಿ ಪುರುಷ್ ಸಿನಿಮಾದ ರಾಮ್ ಸಿಯಾ ರಾಮ್ ಹಾಡು ಹಾಕಲಾಯಿತು. ಇದಕ್ಕೆ ಮೊದಲು ಭಾರತದಲ್ಲಿ ವಿಶ್ವಕಪ್ ನಡೆದಾಗಲೂ ಕೇಶವ್ ಮಹಾರಾಜ್ ಬ್ಯಾಟ್ ಮಾಡಲು ಬಂದಾಗ ಇದೇ ಹಾಡನ್ನು ಹಾಕಲಾಗುತ್ತಿತ್ತು.
ಮೂಲತಃ ಹಿಂದೂ ಧರ್ಮೀಯರಾಗಿರುವ ಕೇಶವ್ ಮಹಾರಾಜ್ ತಮ್ಮ ಬ್ಯಾಟ್ ಮೇಲೆಯೂ ಓಂ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರು ಧಾರ್ಮಿಕ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹೀಗಾಗಿಯೇ ಅವರು ಕ್ರೀಸ್ ಗೆ ಬಂದಾಗ ಆಫ್ರಿಕಾದಲ್ಲೂ ಅದೇ ಹಾಡು ಹಾಕಲಾಯಿತು. ಆಗ ವಿಕೆಟ್ ಕೀಪರ್ ರಾಹುಲ್ ನೀವು ಕ್ರೀಸ್ ಗೆ ಬಂದಾಗಲೆಲ್ಲಾ ಸಿಯಾ ರಾಮ್ ಹಾಡು ಬರುತ್ತದಲ್ಲಾ ಎಂದು ನಕ್ಕರು. ಇದಕ್ಕೆ ಕೇಶವ್ ಕೂಡಾ ನಗುತ್ತಾ ಹೌದು ಎಂದಿದ್ದಾರೆ. ಇವರಿಬ್ಬರ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ಬಹಿರಂಗವಾಗಿದ್ದು, ವಿಡಿಯೋ ವೈರಲ್ ಆಗಿದೆ.