Select Your Language

Notifications

webdunia
webdunia
webdunia
webdunia

ಪುಟಾಣಿ ಅಭಿಮಾನಿಗೆ ಪ್ಯಾಡ್ ಗಿಫ್ಟ್ ಕೊಟ್ಟ ಕೆಎಲ್ ರಾಹುಲ್

ಪುಟಾಣಿ ಅಭಿಮಾನಿಗೆ ಪ್ಯಾಡ್ ಗಿಫ್ಟ್ ಕೊಟ್ಟ ಕೆಎಲ್ ರಾಹುಲ್
ಪರ್ಲ್ , ಶುಕ್ರವಾರ, 22 ಡಿಸೆಂಬರ್ 2023 (09:57 IST)
Photo Courtesy: Twitter
ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 78 ರನ್ ಗಳ ಭಾರೀ ಅಂತರದಿಂದ ಗೆದ್ದುಕೊಂಡಿತು. ಟೀಂ ಇಂಡಿಯಾ ಎರಡನೇ ಬಾರಿ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿ ಗೆದ್ದ ದಾಖಲೆ ಮಾಡಿತು. ಕೆಎಲ್ ರಾಹುಲ್ ನಾಯಕತ್ವದ ಯುವ ತಂಡದ ಈ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಪಂದ್ಯದ ಬಳಿಕ ರಾಹುಲ್ ವರ್ತನೆ ಎಲ್ಲರ ಹೃದಯ ಗೆದ್ದಿದೆ. ಕೆಎಲ್ ರಾಹುಲ್ ತಮ್ಮನ್ನು ಭೇಟಿಯಾಗಲು ಬಂದ ಯುವ ಅಭಿಮಾನಿಗಳಿಗೆ ತಕ್ಕ ಉಡುಗೊರೆ ಕೊಟ್ಟಿದ್ದಾರೆ.

ಪಂದ್ಯದಲ್ಲಿ ತಾವು ಬಳಸಿದ ಪ್ಯಾಡ್ ಗಳನ್ನು ಪುಟಾಣಿ ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದಲ್ಲದೆ, ಅಟೋಗ್ರಾಫ್, ಸೆಲ್ಫೀಗೆ ಪೋಸ್ ನೀಡಿ ಅವರ ಮನಸ್ಸಿಗೆ ಮುದ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಆಯ್ಕೆಯಾದ ಬೆನ್ನಲ್ಲೇ ನಿಷೇಧಕ್ಕೊಳಗಾದ ಟಾಮ್ ಕ್ಯುರೇನ್