Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದು ದಾಖಲೆ ಮಾಡಿದ ಟೀಂ ಇಂಡಿಯಾ

ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದು ದಾಖಲೆ ಮಾಡಿದ ಟೀಂ ಇಂಡಿಯಾ
ಪರ್ಲ್ , ಶುಕ್ರವಾರ, 22 ಡಿಸೆಂಬರ್ 2023 (09:00 IST)
ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯವನ್ನು 78 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ದಾಖಲೆಯನ್ನೂ ಮಾಡಿದೆ.

ದ.ಆಫ್ರಿಕಾ ನೆಲದಲ್ಲಿ ಇದು ಭಾರತಕ್ಕೆ ಎರಡನೇ ಏಕದಿನ ಸರಣಿ ಗೆಲುವಾಗಿದೆ. 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಸರಣಿ ಗೆಲುವು ಕಂಡಿತ್ತು. ಇದು ಎರಡನೇ ಬಾರಿಗೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಫ್ರಿಕಾ ನೆಲದಲ್ಲಿ ಸಿಕ್ಕ ಗೆಲುವು ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ 8  ವಿಕೆಟ್ ನಷ್ಟಕ್ಕೆ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಸಂಜು ಸ್ಯಾಮ್ಸನ್ 108 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಆಫ್ರಿಕಾ 45.5 ಓವರ್ ಗಳಲ್ಲಿ 218 ರನ್ ಗಳಿಗೆ ಆಲೌಟ್ ಆಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋರ್ಝಿ ಈ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮಾಡಿ 81 ರನ್ ಗಳಿಸಿ ಔಟಾದರು. ಆದರೆ ಭಾರತೀಯ ಬೌಲರ್ ಗಳ ಸಂಘಟಿತ ದಾಳಿಯಿಂದಾಗಿ ಆಫ್ರಿಕಾ ಸೋಲು ಕಾಣುವಂತಾಯಿತು. ಅರ್ಷ್ ದೀಪ್ ಸಿಂಗ್ 4, ಆವೇಶ್ ಖಾನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್, ಮುಕೇಶ್ ಕುಮಾರ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.

ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ ಅರ್ಷ್ ದೀಪ್ ಸಿಂಗ್ ಸರಣಿ ಶ್ರೇಷ್ಠ, ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಸರಣಿ ಗೆಲುವಿನ ಮೂಲಕ ಒಂದು ವರ್ಷದಲ್ಲಿ ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ (27) ತಂಡಗಳ ಪೈಕಿ ಎರಡನೇ ಸ್ಥಾನ ಪಡೆಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶತಕದ ಜೊತೆಗೆ ವೃತ್ತಿ ಜೀವನ ಉಳಿಸಿಕೊಂಡ ಸಂಜು ಸ್ಯಾಮ್ಸನ್