Select Your Language

Notifications

webdunia
webdunia
webdunia
webdunia

India-SA ODI: ಟೀಂ ಇಂಡಿಯಾ ಪರ ರಿಂಕು ಸಿಂಗ್ ಡೆಬ್ಯೂಟ್

India-SA ODI: ಟೀಂ ಇಂಡಿಯಾ ಪರ ರಿಂಕು ಸಿಂಗ್ ಡೆಬ್ಯೂಟ್
ಪೋರ್ಟ್ ಆಫ್ ಸ್ಪೇನ್ , ಮಂಗಳವಾರ, 19 ಡಿಸೆಂಬರ್ 2023 (16:19 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅತಿಥೇಯರು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಭಾರತ ಇಂದಿನ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿಕೊಂಡಿದೆ. ಟೆಸ್ಟ್ ತಂಡದ ಭಾಗವಾಗಿರುವ ಶ್ರೇಯಸ್ ಅಯ್ಯರ್ ಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನದಲ್ಲಿ ರಿಂಕು ಸಿಂಗ್ ಪದಾರ್ಪಣೆ ಮಾಡುತ್ತಿದ್ದಾರೆ. ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವ ಬ್ಯಾಟಿಗನಿಗೆ ಈಗ ಏಕದಿನದಲ್ಲಿ ಅವಕಾಶ ನೀಡಲಾಗಿದೆ.

ಅತ್ತ ಆಫ್ರಿಕಾ ಇಂದು ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಬ್ಯುರೇನ್ ಹೆಂಡ್ರಿಕ್ಸ್ ಮತ್ತು ಲಿಝಾಡ್ ವಿಲಿಯಮ್ಸ್ ಇಂದು ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಹೀಗಾಗಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಹೊಂದಿದೆ. ಇಂದಿನ ಪಂದ್ಯವನ್ನು ಗೆದ್ದರೆ ಸರಣಿ ಇಂದೇ ಕೈವಶವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL Auction 2024: ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಮಿಚೆಲ್ ಸ್ಟಾರ್ಕ್