Select Your Language

Notifications

webdunia
webdunia
webdunia
webdunia

India-SA ODI: ಸೌತ್ ಆಫ್ರಿಕಾಗೆ ಆರಂಭಿಕ ಆಘಾತವಿಕ್ಕಿದ ಅರ್ಷ್ ದೀಪ್ ಸಿಂಗ್

India-SA ODI: ಸೌತ್ ಆಫ್ರಿಕಾಗೆ ಆರಂಭಿಕ ಆಘಾತವಿಕ್ಕಿದ ಅರ್ಷ್ ದೀಪ್ ಸಿಂಗ್
ಜೊಹಾನ್ಸ್ ಬರ್ಗ್ , ಭಾನುವಾರ, 17 ಡಿಸೆಂಬರ್ 2023 (13:51 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯರಿಗೆ ಭಾರತ ಆರಂಭಿಕ ಆಘಾತವಿಕ್ಕಿದೆ.

ತಮ್ಮ ಮೊದಲ ಓವರ್ ನಲ್ಲಿಯೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಅರ್ಷ್ ದೀಪ್ ಸಿಂಗ್  ರೀಝಾ ಹೆಂಡ್ರಿಕ್ಸ್, ಡುಸೆನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರೂ ಶೂನ್ಯಕ್ಕೆ ಔಟಾಗಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಆಫ್ರಿಕಾ 3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿದೆ.

ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ವಿಶ್ರಾಂತಿ ನೀಡಿದೆ. ಸ್ಪಿನ್ನರ್ ಗಳಾಗಿ ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ಕಣಕ್ಕಿಳಿದಿದ್ದಾರೆ. ವೇಗಿಗಳಾಗಿ ಅರ್ಷ್ ದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್ ಆಡುತ್ತಿದ್ದಾರೆ.

ಉಳಿದಂತೆ ಇಂದಿನ ಪ್ಲೇಯಿಂಗ್ ಇಲೆವೆನ್ ಹೀಗಿದೆ: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮುಕೇಶ್ ಕುಮಾರ್, ಅರ್ಷ್ ದೀಪ್ ಸಿಂಗ್, ಆವೇಶ್ ಖಾನ್.

Share this Story:

Follow Webdunia kannada

ಮುಂದಿನ ಸುದ್ದಿ

ಜೆಮಿಮಾ ರೊಡ್ರಿಗಸ್ ನೋಡಬೇಕು ಎಂದು ಅತ್ತಿದ್ದ ಅಭಿಮಾನಿಯ ಆಸೆ ಕೊನೆಗೂ ಈಡೇರಿತು!