ಜೊಹಾನ್ಸ್ ಬರ್ಗ್: ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅರ್ಷ್ ದೀಪ್ ಸಿಂಗ್ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
ಕೊನೆಯ ಟಿ20 ಪಂದ್ಯ ಮುಗಿದ ಬಳಿಕ ಭಾರತ ತಂಡ ಬಸ್ ನಲ್ಲಿ ಹೋಟೆಲ್ ಗೆ ತೆರಳುವಾಗ ಸೂರ್ಯಕುಮಾರ್ ಯಾದವ್ ಸಹ ಆಟಗಾರ ಅರ್ಷ್ ದೀಪ್ ಸಿಂಗ್ ಗೆ ಬೈದಾಡಿಕೊಳ್ಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಸ್ ಹತ್ತುತ್ತಿದ್ದ ಸೂರ್ಯಕುಮಾರ್ ಯಾದವ್ ಆಗಲೇ ಸೀಟ್ ನಲ್ಲಿ ಕೂತಿದ್ದ ಅರ್ಷ್ ದೀಪ್ ಸಿಂಗ್ ರನ್ನು ನೋಡಿ ಕೈ ತೋರಿಸಿ ಆಕ್ರೋಶ ಹೊರಹಾಕುತ್ತಾರೆ. ಇದಕ್ಕೆ ಅರ್ಷ್ ದೀಪ್ ಕೂಡಾ ಉತ್ತರ ನೀಡುತ್ತಾರೆ. ಬಳಿಕ ಸೂರ್ಯ ಮುಖ ಸಿಂಡರಿಸಿಕೊಂಡೇ ಅರ್ಷ್ ದೀಪ್ ಕುಳಿತಿದ್ದ ಹಿಂದಿನ ಸೀಟ್ ನಲ್ಲಿ ಸೂರ್ಯ ಕೂರುತ್ತಾರೆ.
ಇವರಿಬ್ಬರ ಈ ವಿಡಿಯೋ ನೋಡಿ ಯಾವುದೇ ವಿಚಾರಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಯಾವ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.